ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ತಿನ ಮೂಲಕ ಸಂವಿಧಾನದ ವಿಕಸನ: ಧನಕರ್‌

Last Updated 19 ಮಾರ್ಚ್ 2023, 16:12 IST
ಅಕ್ಷರ ಗಾತ್ರ

ನವದೆಹಲಿ: ‘ಸಂವಿಧಾನವು ಸಂಸತ್ತಿನ ಮೂಲಕ ವಿಕಸನಗೊಳ್ಳಬೇಕೇ ಹೊರತು ಕಾರ್ಯಾಂಗದ ಮುಖೇನವಲ್ಲ. ಇದರಲ್ಲಿ ಕಾರ್ಯಾಂಗ‌, ನ್ಯಾಯಾಂಗ ಸೇರಿದಂತೆ ಇತರೆ ಯಾವ ಉನ್ನತ ಸಂಸ್ಥೆಗಳ ಪಾತ್ರವೂ ಇಲ್ಲ’ ಎಂದು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಹೇಳಿದ್ದಾರೆ.

ಭಾನುವಾರ ಇಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ತಮಿಳುನಾಡಿನ ಮಾಜಿ ರಾಜ್ಯಪಾಲ ಪಿ.ಎಸ್‌.ರಾಮಮೋಹನ್ ರಾವ್‌ ಅವರ ಜೀವನಚರಿತ್ರೆ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ಸರ್ಕಾರದ ಸ್ಥಿರತೆ, ಸಾಮರಸ್ಯ ಹಾಗೂ ಉತ್ಪಾದಕತೆಯನ್ನು ನಿರ್ಧರಿಸುವುದೇ ಸಂವಿಧಾನದ ಶ್ರೇಷ್ಠತೆ. ಜನಾದೇಶವನ್ನು ಪ್ರತಿಬಿಂಬಿಸುವ ಸಂಸತ್ತು ಈ ಸಂವಿಧಾನದ ಪ್ರಮುಖ ನಿರ್ಮಾತೃ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT