ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಳಿದಷ್ಟು ಮೈಲೇಜ್ ಇಲ್ಲ: ಕಾರು ಮಾಲೀಕರಿಗೆ ₹ 3.10 ಲಕ್ಷ ಪರಿಹಾರ ನೀಡಲು ಸೂಚನೆ

Last Updated 4 ಡಿಸೆಂಬರ್ 2022, 12:38 IST
ಅಕ್ಷರ ಗಾತ್ರ

ತಿರುವನಂತಪುರ: ಆಶ್ವಾಸನೆ ನೀಡಿದಂತೆ ಮೈಲೇಜ್‌ ನೀಡದ ಕಾರಣಕಾರು ಮಾಲೀಕರಿಗೆ ₹3.10 ಲಕ್ಷ ಪರಿಹಾರ ಪಾವತಿಸುವಂತೆ ಕಾರು ಡೀಲರ್ ಮತ್ತು ತಯಾರಕರಿಗೆ ಕೇರಳದ ಗ್ರಾಹಕ ಆಯೋಗ ಆದೇಶಿಸಿದೆ.

ಫೋರ್ಡ್ ಇಂಡಿಯಾ ಮತ್ತು ಅದರ ಡೀಲರ್ ಕೈರಾಲಿ ಫೋರ್ಡ್ ಅವರಿಗೆ ಅರ್ಜಿದಾರರಾದ ತ್ರಿಶ್ಶೂರ್ ಸ್ಥಳೀಯ ನಿವಾಸಿ ಸೌಧಾಮಿನಿ ಪಿ.ಪಿ.ಗೆ ಪರಿಹಾರ ಪಾವತಿಸುವಂತೆ ತ್ರಿಶ್ಶೂರ್ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ನಿರ್ದೇಶನ ನೀಡಿದೆ.

2014 ರಲ್ಲಿ ಖರೀದಿಸಿದ ₹ 8.9 ಲಕ್ಷ ಬೆಲೆಯ ಫೋರ್ಡ್ ಕ್ಲಾಸಿಕ್ ಡೀಸೆಲ್ ಕಾರು ಪ್ರತಿ ಲೀಟರ್‌ಗೆ 32 ಕಿಲೋ ಮೀಟರ್ ಮೈಲೇಜ್ ನೀಡುವುದಾಗಿ ಡೀಲರ್ ಮತ್ತು ತಯಾರಕರು ಭರವಸೆ ನೀಡಿದ್ದರು. ಆದರೆ, ಕೇವಲ 16 ಕಿಲೋ ಮೀಟರ್ ಮೈಲೇಜ್ ನೀಡಿದೆ ಎಂದು ಸೌಧಾಮಿನಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

‘ಮೈಲೇಜ್ ಪರೀಕ್ಷಾ ಪರಿಸ್ಥಿತಿಯಲ್ಲಿದೆ’ ಎಂದು ಡೀಲರ್ ಮತ್ತು ತಯಾರಕರು ಸಮರ್ಥಿಸಿಕೊಂಡ ಕಾರಣ ಆಯೋಗವು ಅದನ್ನು ಪರಿಶೀಲಿಸಲು ತಜ್ಞರನ್ನು ನೇಮಿಸಿತು. ತಜ್ಞರು ಪರಿಶೀಲಿಸಿದಾಗ ಪ್ರತಿ ಲೀಟರ್‌ಗೆ ಮೈಲೇಜ್ ಕೇವಲ 19.6 ಕಿಲೋ ಮೀಟರ್ ಬಂತು.

ಆರ್ಥಿಕ ನಷ್ಟಕ್ಕೆ ₹1.5 ಲಕ್ಷ ಪರಿಹಾರ, ದೂರುದಾರರು ಅನುಭವಿಸಿದ ಯಾತನೆ ಮತ್ತು ಕಷ್ಟಗಳಿಗೆ₹1.5 ಲಕ್ಷ ಮತ್ತು ₹10,000 ಗಳನ್ನು ವ್ಯಾಜ್ಯ ವೆಚ್ಚವಾಗಿ ಅರ್ಜಿ ಸಲ್ಲಿಸಿದ ದಿನಾಂಕದಿಂದ ಶೇಕಡ 9 ರಷ್ಟು ಬಡ್ಡಿಯೊಂದಿಗೆ ನೀಡುವಂತೆ ಹೇಳಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎ. ಡಿ. ಬೆನ್ನಿ, ‘ಭರವಸೆ ನೀಡಿದಂತೆ ಮೈಲೇಜ್ ನೀಡದ ವಾಹನಕ್ಕೆ ಪರಿಹಾರ ನೀಡಿರುವುದು ಅಪರೂಪದ ಆದೇಶ ಎಂದು ಪರಿಗಣಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT