ಶನಿವಾರ, ಡಿಸೆಂಬರ್ 5, 2020
21 °C

ಕೋವಿಡ್‌: ಗಣನೀಯ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌ ಹೊಸ ಪ್ರಕರಣಗಳ ಸಂಖ್ಯೆ ಮತ್ತು ಸಾವಿನ ಪ್ರಮಾಣ ಇಳಿಕೆಯಾಗಿದೆ. ದೇಶದಲ್ಲಿ ಕೋವಿಡ್‌ ಮರಣ ಪ್ರಮಾಣ
ಶೇ 1.50ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ. 

ರಾಜಸ್ಥಾನ, ಜಾರ್ಖಂಡ್, ಬಿಹಾರ ಸೇರಿದಂತೆ 14 ರಾಜ್ಯಗಳಲ್ಲಿ ಈ ಪ್ರಮಾಣ ಶೇ 1ಕ್ಕಿಂತಲೂ ಕಡಿಮೆಯಿದೆ. ಮೇ ತಿಂಗಳಿನಲ್ಲಿ ಈ ದರ ಶೇ 3.23ರಷ್ಟಿತ್ತು. 

ಭಾರತದಲ್ಲಿ ಕೋವಿಡ್‌ ಮರಣ ಪ್ರಮಾಣ ಜಗತ್ತಿನಲ್ಲೇ ಕಡಿಮೆಯಿದೆ. ಆರೋಗ್ಯ ಇಲಾಖೆಯ ದತ್ತಾಂಶಗಳ ಪ್ರಕಾರ, ಕೋವಿಡ್‌ನಿಂದ ನಿತ್ಯ ಮೃತಪಡುವವರ ಸಂಖ್ಯೆ 500ಕ್ಕಿಂತ ಕೆಳಗೆ ಇಳಿದಿದೆ. 

ನಿತ್ಯ ವರದಿಯಾಗುವ ಹೊಸ ಪ್ರಕರಣಗಳು 50 ಸಾವಿರಕ್ಕಿಂತ ಕಡಿಮೆ ಇವೆ. ತಿಂಗಳಲ್ಲಿ ಎರಡನೇ ಬಾರಿ ಹೀಗಾಗಿದೆ. ಸೋಂಕು ತಡೆಗೆ ಯಶಸ್ವಿ ಕಾರ್ಯತಂತ್ರ, ತಪಾಸಣೆಗಳ ಸಂಖ್ಯೆ ಹೆಚ್ಚಳ, ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸಾ ವಿಧಾನ ಅಳವಡಿಕೆಯಿಂದಾಗಿ ಸೋಂಕಿಗೆ ಬಲಿಯಾಗುವವರ ಸಂಖ್ಯೆ ಗಣನೀಯ ಇಳಿಕೆ ಕಂಡಿದೆ ಎಂದು ಸರ್ಕಾರ ಹೇಳಿದೆ. 

ಚೇತರಿಕೆ ದರ ಶೇ 90.23ರಷ್ಟಿದ್ದು, 71 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ.

ಒಟ್ಟು ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ 8.26 ಮಾತ್ರ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಸೇರಿ 10 ರಾಜ್ಯಗಳಲ್ಲಿ ಶೇ 78ರಷ್ಟು ಪೀಡಿತರು ಗುಣಮುಖರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು