ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಿಯುತ್ತಿರುವ ಜಿಟಿಜಿಟಿ ಮಳೆ: ವರ್ಷದ ಮೊದಲ ‘ಸ್ವಚ್ಛ ಗಾಳಿ‘ ಉಸಿರಾಡಿದ ದೆಹಲಿ ಜನ

Last Updated 16 ಸೆಪ್ಟೆಂಬರ್ 2022, 13:24 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಹಲವೆಡೆ ದಿನವಿಡೀ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ, ಗಾಳಿಯ ಶುದ್ಧತೆಯ ಪ್ರಮಾಣ ವರ್ಷದಲ್ಲೇ ಮೊದಲ ಬಾರಿಗೆ ಉತ್ತಮ ಗುಣಮಟ್ಟಕ್ಕೆ ಚೇತರಿಕೆ ಕಂಡಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಹೇಳಿದೆ.

ಗಾಳಿಯ ಗುಣಮಟ್ಟದ ಸೂಚ್ಯಂಕದಲ್ಲಿ ಶುಕ್ರವಾರ ಸಂಜೆ 4 ಗಂಟೆಯ ವೇಳೆಗೆ ದಿನದ 24 ಗಂಟೆಗಳ ಸರಾಸರಿ 47 ದಾಖಲಾಗಿದೆ. ಗುರುವಾರ ಗಾಳಿಯ ಶುದ್ಧತೆಯ ಗುಣಮಟ್ಟವು 57 ಇತ್ತು.

ನೆರೆಯ ನಗರಗಳಾದ ಗಾಜಿಯಾಬಾದ್‌(48), ಗುರುಗ್ರಾಮ (48), ಗ್ರೇಟರ್‌ ನೊಯಿಡಾ (46) ಮತ್ತು ನೊಯಿಡಾ(47) ದಲ್ಲಿಯೂ ಗಾಳಿಯ ಶುದ್ಧತೆ ಉತ್ತಮ ಎಂದು ದಾಖಲಾಗಿದೆ.

ಗಾಳಿಯ ಗುಣಮಟ್ಟದ ಸೂಚ್ಯಂಕವನ್ನು ಸೊನ್ನೆಯಿಂದ ಐನೂರರ ವರೆಗೆ ಅಳೆಯಲಾಗುತ್ತದೆ. 0-50ರ ನಡುವಿದ್ದರೆ ಉತ್ತಮ, 51-100ರ ವರೆಗಿದ್ದರೆ ಸಮಾಧಾನಕರ, 101-200ರ ವರೆಗಿದ್ದರೆ ಸಾಧಾರಣ, 201-300ರ ವರೆಗಿದ್ದರೆ ಕಳಪೆ, 301-400ರ ವರೆಗಿದ್ದರೆ ಅತಿಯಾದ ಕಳಪೆ ಮತ್ತು 401-500ರ ವರೆಗಿದ್ದರೆ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.

ದೆಹಲಿಯಲ್ಲಿ ಕಳೆದ 127 ದಿನಗಳಿಂದ ರಾಜಧಾನಿಯಲ್ಲಿ ಗಾಳಿಯ ಶುದ್ಧತೆಯ ಗುಣಮಟ್ಟ ಕಳಪೆಯಾಗಿತ್ತು. ಗುರುವಾರ ಬೆಳಗ್ಗೆಯಿಂದ ನಿರಂತರವಾಗಿ ಸಾಧಾರಣ ಮಳೆ ಸುರಿಯುತ್ತಿರುವುದರಿಂದ ಮರ್ಕ್ಯುರಿ ಪ್ರಮಾಣವು ತಗ್ಗಿದೆ. ಕನಿಷ್ಠ 22.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT