ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿ ಅತ್ಯಾಚಾರ, ಕೊಲೆ: ಜೀವಾವಧಿ ಶಿಕ್ಷೆ ವಿಧಿಸಿದ್ದಕ್ಕೆ ಚಪ್ಪಲಿ ಎಸೆದ ಅಪರಾಧಿ

Last Updated 30 ಡಿಸೆಂಬರ್ 2021, 10:03 IST
ಅಕ್ಷರ ಗಾತ್ರ

ಅಹಮದಾಬಾದ್‌: ಕಳೆದ ಏಪ್ರಿಲ್‌ನಲ್ಲಿ ದಾಖಲಾದ 5 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸೂರತ್‌ನ ನ್ಯಾಯಾಲಯ 27 ವರ್ಷದ ಅಪರಾಧಿಗೆ ಜೀವಾವಧಿ ಶಿಕ್ಷೆ ನೀಡಿದೆ.

ವಿಶೇಷ ಪೋಸ್ಕೋ ಕೋರ್ಟ್‌ ನ್ಯಾಯಮೂರ್ತಿ ಪಿಎಸ್‌ ಕಾಲಾ ಅವರು ಶಿಕ್ಷೆಯನ್ನು ಪ್ರಕಟಿಸುತ್ತಿದ್ದಂತೆ ರೊಚ್ಚಿಗೆದ್ದ ಅಪರಾಧಿ ಸುಜಿತ್‌ ಸಾಕೇತ್‌ ಚಪ್ಪಲಿಯನ್ನು ಎಸೆದಿದ್ದಾರೆ. ಆದರೆ ಚಪ್ಪಲಿ ನ್ಯಾಯಮೂರ್ತಿಗೆ ತಗುಲದೆ ಸಾಕ್ಷಿ ನಿಲ್ಲುವ ಕಟಕಟೆ ಸಮೀಪ ಬಿದ್ದಿದೆ.

ಮಧ್ಯಪ್ರದೇಶದ ವಲಸೆ ಕಾರ್ಮಿಕನಾದ ಸುಜಿತ್‌ ಏಪ್ರಿಲ್‌ 30ರಂದು 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಹತ್ಯೆ ಮಾಡಿದ್ದ. ಬಾಲಕಿ ನೆರೆಮನೆಯ ವಲಸೆ ಕಾರ್ಮಿಕನ ಮಗಳಾಗಿದ್ದಳು. ಬಾಲಕಿ ಒಂಟಿಯಾಗಿದ್ದ ಸಂದರ್ಭ ಚಾಕೋಲೆಟ್‌ ಆಸೆ ತೋರಿಸಿ ಅಪಹರಿಸಿದ್ದ. ನಿರ್ಜನ ಪ್ರದೇಶಕ್ಕೆ ಒಯ್ದು ಅತ್ಯಾಚಾರ ನಡೆಸಿ, ಆಕೆಯ ಸಾವಿಗೆ ಕಾರಣನಾಗಿದ್ದ.

ಹಜಿರಾ ಪೊಲೀಸ್‌ ಠಾಣೆಯಲ್ಲಿ ಆರೋಪಿ ಮೇಲೆ ಎಫ್‌ಐಆರ್‌ ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ 26 ಸಾಕ್ಷಿದಾರರನ್ನು ವಿಚಾರಣೆ ನಡೆಸಲಾಗಿದೆ. 53 ಸಮರ್ಪಕ ಸಾಕ್ಷಿಗಳನ್ನು ಪರಿಗಣಿಸಿ ಸುಜಿತ್‌ ಅಪರಾಧಿ ಎಂದು ಕೋರ್ಟ್‌ ತೀರ್ಪು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT