ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆಗೆ ಪ್ರಯಾಣಿಕರ ವಿಭಾಗದಲ್ಲಿ ಶೇ 70ರಷ್ಟು ನಷ್ಟ

ಕೊರೊನಾ ಬಿಕ್ಕಟ್ಟು: ಸಂಚಾರ ರದ್ದುಪಡಿಸಿದ ಪರಿಣಾಮ
Last Updated 24 ಮಾರ್ಚ್ 2021, 9:46 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ಸಾಂಕ್ರಾಮಿಕದ ಬಿಕ್ಕಟ್ಟಿನಿಂದಾಗಿ ಕಳೆದ ಆರ್ಥಿಕ ವರ್ಷದಲ್ಲಿ ರೈಲ್ವೆ ಸಚಿವಾಲಯವು ಪ್ರಯಾಣಿಕರ ವಿಭಾಗದಲ್ಲಿ ₹38,017 ಕೋಟಿ ನಷ್ಟ ಅನುಭವಿಸಿತು. ಆದರೆ, ಶ್ರಮಿಕ ರೈಲುಗಳ ಸೇವೆ, ಅಗತ್ಯ ಸರಕು ಸಾಣೆಯಲ್ಲಿ ಕೈಗೊಂಡ ಕೆಲವೊಂದು ಹೊಸ ಪ್ರಯತ್ನಗಳಿಂದಾಗಿ ಸ್ವಲ್ಪ ಮಟ್ಟಿಗೆ ನಷ್ಟವನ್ನು ಸರಿದೂಗಿಸಿಕೊಳ್ಳಲಾಗಿದೆ.

ಪ್ರಯಾಣಿಕರ ವಿಭಾಗದಲ್ಲಿ ಕಳೆದ ವರ್ಷ ರೈಲ್ವೆ ಸಚಿವಾಲಯದ ನಿವ್ವಳ ಆದಾಯ ₹53,525.57 ಕೋಟಿ ಇತ್ತು. ಆದರೆ ಈ ವರ್ಷ ಕೇವಲ ₹15,507.68 ಕೋಟಿ ಆಗಿದ್ದು, ಶೇ 71.03ರಷ್ಟು ಕಡಿಮೆಯಾಗಿದೆ.

ಏಪ್ರಿಲ್ 2020ರಿಂದ ಫೆಬ್ರವರಿ 2021ರವರೆಗೆ ಪ್ರಯಾಣಿಕರ ವಿಭಾಗದ ಒಟ್ಟು ಆದಾಯ ₹ 12,409.49 ಕೋಟಿಗಳಾಗಿದ್ದು, ಹಿಂದಿನ ವರ್ಷ ಇದೇ ಅವಧಿಯಲ್ಲಿ ₹48,809.40 ಕೋಟಿ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT