Covid-19 India Update: ದೇಶದಲ್ಲಿ ಕೋವಿಡ್ ದೃಢಪಟ್ಟ 16,752 ಪ್ರಕರಣಗಳು

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್–19 ದೃಢಪಟ್ಟ 16,752 ಹೊಸ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 113 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, 11,718 ಮಂದಿ ಗುಣಮುಖರಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯಿಂದ ತಿಳಿದು ಬಂದಿದೆ.
ಪ್ರಸ್ತುತ ಭಾರತದಲ್ಲಿ 1,64,511 ಪ್ರಕರಣಗಳು ಸಕ್ರಿಯವಾಗಿವೆ. ಒಟ್ಟು 1,10,96,731 ಪ್ರಕರಣಗಳ ಪೈಕಿ ಈವರೆಗೂ 1,07,75,169 ಮಂದಿ ಗುಣಮುಖರಾಗಿದ್ದರೆ, 1,57,051 ಜನ ಸಾವಿಗೀಡಾಗಿದ್ದಾರೆ.
ಒಟ್ಟು 21.62 ಕೋಟಿ ಗಂಟಲು ದ್ರವ ಮಾದರಿಗಳಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ ಹಾಗೂ 1,43,01,266 ಜನರಿಗೆ ಲಸಿಕೆ ಹಾಕಲಾಗಿದೆ.
ಮಹಾರಾಷ್ಟ್ರದಲ್ಲಿ 73,734, ಕೇರಳದಲ್ಲಿ 50,803 ಹಾಗೂ ಕರ್ನಾಟಕದಲ್ಲಿ 5,657 ಸಕ್ರಿಯ ಪ್ರಕರಣಗಳಿವೆ.
#CoronaVirusUpdates:#COVID19 testing status update:@ICMRDELHI stated that 21,62,31,106 samples tested upto February 27, 2021
7,95,723 samples tested on February 27, 2021#StaySafe #Unite2FightCorona pic.twitter.com/7cYakvxXw0
— #IndiaFightsCorona (@COVIDNewsByMIB) February 28, 2021
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.