ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಚಾಲಿತ ವಾಹನಗಳ ದರ ಎರಡು ವರ್ಷದಲ್ಲಿ ಇಳಿಕೆ: ನಿತಿನ್‌ ಗಡ್ಕರಿ

Last Updated 22 ಮಾರ್ಚ್ 2022, 13:34 IST
ಅಕ್ಷರ ಗಾತ್ರ

ನವದೆಹಲಿ: ತಂತ್ರಜ್ಞಾನದ ಪ್ರಗತಿಯಿಂದಾಗಿ ವಿದ್ಯುತ್‌ಚಾಲಿತ ವಾಹನಗಳ ಉತ್ಪಾದನೆ ವೆಚ್ಚವು ತಗ್ಗಲಿದ್ದು, ಎರಡು ವರ್ಷದಲ್ಲಿ ಪೆಟ್ರೋಲ್‌ ಆಧರಿತ ವಾಹನಗಳಿಗೆ ಸಮನಾಗಿ ಇರಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದ್ದಾರೆ.

‘ಎರಡು ವರ್ಷದಲ್ಲಿ ವಿದ್ಯುತ್ ಚಾಲಿತ ಸ್ಕೂಟರ್‌, ಕಾರು, ಆಟೊರಿಕ್ಷಾಗಳ ದರವು ಪೆಟ್ರೋಲ್‌ ಆಧರಿತ ವಾಹನಗಳಿಗೆ ಸರಿಸಮಾನವಾಗಿ ಇರಲಿದೆ. ಲಿಥಿಯಂ ಐಯಾನ್ ಬ್ಯಾಟರಿ ದರವೂ ಭವಿಷ್ಯದಲ್ಲಿ ಇಳಿಕೆಯಾಗಲಿದೆ’ ಎಂದು ಲೋಕಸಭೆಯಲ್ಲಿ ತಿಳಿಸಿದರು.

ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅನುದಾನ ಬೇಡಿಕೆ ಕುರಿತ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು, ‘ಝಿಂಕ್‌ ಐಯಾನ್‌, ಅಲ್ಯುಮೀನಿಯಂ ಐಯಾನ್‌, ಸೋಡಿಯಂ ಐಯಾನ್‌ ಬ್ಯಾಟರಿಗಳ ಸಂಯೋಜನೆಯನ್ನು ಈಗ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಪೆಟ್ರೋಲ್‌ಗೆ ನೀವು ₹ 100 ವ್ಯಯಿಸುತ್ತಿದ್ದಲ್ಲಿ, ವಿದ್ಯುತ್‌ ಚಾಲಿತ ವಾಹನ ಬಳಕೆಗೆ ₹ 10 ವ್ಯಯವಾಗಲಿದೆ’ ಎಂದರು. ಇದೇ ಸಂದರ್ಭದಲ್ಲಿ ಅವರು‘ಆರ್ಥಿಕ ಮಿತವ್ಯಯಿಯಾದ ದೇಶಿ ಇಂಧನಕ್ಕೆ ನಾವು ಬದಲಾಗಬೇಕಿದೆ. ಶೀಘ್ರದಲ್ಲೇ ಇಂತಹ ಇಂಧನ ಸಾಕಾರವಾಗಲಿದೆ’ ಎಂದರು.

ಸಾರಿಗೆ ಉದ್ದೇಶಕ್ಕಾಗಿ ಹೈಡ್ರೋಜನ್‌ ಟೆಕ್ನಾಲಜಿ ಬಳಸಲು ಸಂಸದರು ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು. ಪರಿಸರಸ್ನೇಹಿಯಾದ ಜಲಜನಕ ಉತ್ಪಾದನೆಗೆಕೊಳಚೆ ನೀರು ಸಂಸ್ಕರಿಸಲು ತಮ್ಮ ಕ್ಷೇತ್ರಗಳಲ್ಲಿ ಕ್ರಮವಹಿಸಬೇಕು ಎಂದೂ ಮನವಿ ಮಾಡಿದರು.

ಜಲಜನಕವು ಶೀಘ್ರದಲ್ಲಿ ಅತ್ಯಂತ ಅಗ್ಗವಾದಪರ್ಯಾಯ ಇಂಧನ ಮೂಲವಾಗಲಿದೆ ಎಂದು ಗಡ್ಕರಿ ಅವರು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT