ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯಕ್ಕೆ ಓಮೈಕ್ರಾನ್‌? ರಾಜ್ಯಗಳಿಗೆ ಪತ್ರ ಬರೆದ ಕೇಂದ್ರ ಸರ್ಕಾರ

ಬೆಂಗಳೂರು ಸೇರಿ 7 ನಗರಗಳ ಪ್ರಕರಣಗಳ ಜಿನೋಮ್ ಸೀಕ್ವೆನ್ಸಿಂಗ್‌ಗೆ ಸೂಚನೆ
Last Updated 22 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ನವದೆಹಲಿ:ಬೆಂಗಳೂರು ಸೇರಿ ಏಳು ಮೆಟ್ರೊ ನಗರಗಳಲ್ಲಿ ಓಮೈಕ್ರಾನ್‌ ರೂಪಾಂತರ ತಳಿಯ ಕೋವಿಡ್‌ ಸಮುದಾಯಕ್ಕೆ ಹರಡಿದೆಯೇ ಎಂಬುದನ್ನು ಪರಿಶೀಲಿಸಿ ಎಂದು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದೆ.

‘ಬೆಂಗಳೂರು, ದೆಹಲಿ, ಭುವನೇಶ್ವರ, ಚೆನ್ನೈ, ಮುಂಬೈ, ಪುಣೆ, ಹೈದರಾಬಾದ್‌ ಮತ್ತು ಕೋಲ್ಕತ್ತದಲ್ಲಿ ಓಮೈಕ್ರಾನ್‌, ಸಮುದಾಯಕ್ಕೆ ಹರಡಿ ದೆಯೇ ಎಂಬುದನ್ನು ಪರಿಶೀಲಿಸ ಬೇಕಿದೆ. ಇದಕ್ಕಾಗಿ ಈ ನಗರಗಳಲ್ಲಿ ಕೋವಿಡ್‌ ದೃಢಪಡುವ ಪ್ರತಿ ವ್ಯಕ್ತಿಯ ಮೂಗು ಮತ್ತು ಗಂಟಲ ದ್ರವದ ಮಾದರಿಯನ್ನು ವೈರಾಣು ಸಂರಚನೆ ವಿಶ್ಲೇಷಣೆಗೆ (ಜಿನೋಮ್‌ ಸೀಕ್ವೆನ್ಸಿಂಗ್) ಕಳುಹಿಸಬೇಕು. ಇದಕ್ಕಾಗಿ ಗುರುತಿಸಲಾದ ಪ್ರಯೋಗಾಲಯಗಳಲ್ಲೇ ಈ ವಿಶ್ಲೇಷಣೆ ನಡೆಸಬೇಕು’ ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರವು (ಎನ್‌ಸಿಡಿಸಿ) ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದೆ.

ದೇಶದಲ್ಲಿ ಈವರೆಗೆ ಒಟ್ಟು 222 ಓಮೈಕ್ರಾನ್‌ ಪ್ರಕರಣಗಳು ಪತ್ತೆಯಾಗಿವೆ. ಆದರೆ ಇವುಗಳಲ್ಲಿ ವಿದೇಶ ಪ್ರಯಾಣದ ಹಿನ್ನೆಲೆಯೇ ಇಲ್ಲದ 51 ಜನರಿಗೆ ಓಮೈಕ್ರಾನ್‌ ತಗುಲಿದೆ.ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕ, ಕೇರಳ, ದೆಹಲಿ ಮತ್ತು ಜಮ್ಮು–ಕಾಶ್ಮೀರದಲ್ಲಿ ಪತ್ತೆಯಾಗಿರುವ ಹಲವು ಪ್ರಕರಣಗಳಲ್ಲಿ, ಸೋಂಕಿತರಿಗೆ ವಿದೇಶ ಪ್ರಯಾಣದ ಹಿನ್ನೆಲೆಯೇ ಇಲ್ಲ. ಈ ರಾಜ್ಯಗಳಲ್ಲಿ ಓಮೈಕ್ರಾನ್‌ ಸಮುದಾಯಕ್ಕೆ ಹರಡಿದೆ ಎಂಬುದನ್ನು ಇದು ಸೂಚಿಸುತ್ತದೆ. ಮುಂದಿನ ದಿನಗಳಲ್ಲಿ ಓಮೈಕ್ರಾನ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗಬಹುದು ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

‘ಓಮೈಕ್ರಾನ್ ಸಮುದಾಯಕ್ಕೆ ಹರಡಿರುವ ಸಾಧ್ಯತೆ ಅತ್ಯಧಿಕವಾಗಿರುವ ಕಾರಣ, ಶಂಕಿತ ನಗರಗಳಲ್ಲಿನ ಎಲ್ಲಾ ಕೋವಿಡ್‌ ಪ್ರಕರಣಗಳನ್ನು ವೈರಾಣು ಸಂರಚನೆ ವಿಶ್ಲೇಷಣೆಗೆ ಒಳಪಡಿಸಲು ನಿರ್ಧರಿಸಲಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಧಾನಿ ಸಭೆ ಇಂದು
ದೇಶದಲ್ಲಿ ಓಮೈಕ್ರಾನ್‌ ಸ್ಥಿತಿಗತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸರ್ಕಾರದ ಉನ್ನತ ಅಧಿಕಾರಿಗಳ ಜತೆಗೆ ಸಭೆ ನಡೆಸಲಿದ್ದಾರೆ. ಈ ವಿಚಾರವಾಗಿ ಪ್ರಧಾನಿ ಮೋದಿ ಅವರು ಈ ಹಿಂದೆ ಸಭೆ ನಡೆಸಿದ್ದು, ನ. 27ರಂದು.

ಮತ್ತೆ ಮೂವರಿಗೆ ಓಮೈಕ್ರಾನ್‌
ಬೆಂಗಳೂರು:
ನಗರದಲ್ಲಿ ಮತ್ತೆ ಮೂವರು ಕೊರೋನಾ ರೂಪಾಂತರ ತಳಿ ಓಮೈಕ್ರಾನ್‌ ಸೋಂಕು ಹೊಂದಿ ರುವುದು ಬುಧವಾರ ದೃಢಪಟ್ಟಿದ್ದು, ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.

ಬ್ರಿಟನ್‌ನಿಂದ ಡಿ.14ರಂದು ಮರಳಿದ ವಿದ್ಯಾರ್ಥಿಯು ಓಮೈಕ್ರಾನ್‌ ಸೋಂಕು ಇರುವುದು ಪತ್ತೆಯಾಗಿದೆ. ಅವರ ನೇರ ಸಂಪರ್ಕಕ್ಕೆ ಬಂದ ತಂದೆತಾಯಿಯೂ ಈ ರೂಪಾಂತರ ತಳಿಯ ಸೊಂಕು ಹೊಂದಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಈ ಕುರಿತ ವಿವರಗಳನ್ನು ಆರೋಗ್ಯ ಇಲಾಖೆ ಇನ್ನೂ ಅಧಿಕೃತ ವಾಗಿ ಬಿಡುಗಡೆ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT