ಬುಧವಾರ, ಜುಲೈ 28, 2021
23 °C

ಲಸಿಕೆ ಪಡೆಯುವುದರಿಂದ ಮರಣ ಸಾಧ್ಯತೆಯ ಆತಂಕ ಬಹುತೇಕ ದೂರ: ವಿನೋದ್‌ ಪಾಲ್‌

‍ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌ ತಡೆ ಲಸಿಕೆಯ ಎರಡು ಡೋಸ್‌ ಪಡೆಯುವುದರಿಂದ ಮರಣ ಸಾಧ್ಯತೆಯ ಆತಂಕ ಬಹುತೇಕ ದೂರವಾಗಿದೆ ಎಂದು ನೀತಿ ಆಯೋಗದ ಸದಸ್ಯ ವಿನೋದ್‌ ಪಾಲ್‌ ತಿಳಿಸಿದ್ದಾರೆ.

ಎರಡೂ ಡೋಸ್‌ ಲಸಿಕೆ ಪಡೆದವರಲ್ಲಿ ಸಾವಿನ ಸಾಧ್ಯತೆ ಶೇ 98ರಷ್ಟು ಕಡಿಮೆಯಾಗಿರುವುದು ಪಂಜಾಬ್‌ ಪೊಲೀಸ್‌ ಸಿಬ್ಬಂದಿಯಲ್ಲಿ ಕಂಡುಬಂದಿದೆ ಎಂದು ಚಂಡೀಗಡ ಹಾಗೂ ಪಂಜಾಬ್‌ ಸರ್ಕಾರ ನಡೆಸಿದ ಅಧ್ಯಯನದಿಂದ ತಿಳಿದುಬಂದಿದ್ದಾಗಿ ಅವರು ಹೇಳಿದ್ದಾರೆ.

ಲಸಿಕೆಯ ಒಂದು ಡೋಸ್‌ ಮಾತ್ರ ಪಡೆದ 35,856 ಪೊಲೀಸರ ಪೈಕಿ 9 ಮಂದಿ ಮೃತಪಟ್ಟಿದ್ದರೆ,  ಒಂದು ಡೋಸ್‌ ಕೂಡ ಪಡೆಯದ 4,868 ಸಿಬ್ಬಂದಿಯ ಪೈಕಿ, 15 ಮಂದಿ ಕೋವಿಡ್‌–19ನಿಂದ ಮೃತಪಟ್ಟಿದ್ದಾರೆ. ಎರಡೂ ಡೋಸ್‌ ಪಡೆದ 42,720 ಪೊಲೀಸ್‌ ಸಿಬ್ಬಂದಿಯ ಪೈಕಿ ಇಬ್ಬರು ಮಾತ್ರ ಮೃತಪಟ್ಟಿದ್ದಾಗಿ ಅಧ್ಯಯನದಿಂದ ತಿಳಿದುಬಂದಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು