ಗುರುವಾರ , ಜೂನ್ 24, 2021
25 °C

Covid-19 India Update: ದೇಶದಲ್ಲಿ 3,62,727 ಸೋಂಕು ಪ್ರಕರಣ ದಾಖಲು

ಪಿಟಿಐ‌ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ ಕಳೆದ 24 ತಾಸಿನಲ್ಲಿ 3,62,727 ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದ್ದು, 4,120 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಬೆಳಗ್ಗೆ ಪ್ರಕಟಣೆಯಲ್ಲಿ ತಿಳಿಸಿದೆ.

ದೇಶದಲ್ಲಿ ಒಟ್ಟು 2,37,03,665 ಕೋವಿಡ್ ಸೋಂಕು ಪ್ರಕರಣಗಳು ದೃಢಗೊಂಡಿದೆ. ಹಾಗೆಯೇ ಇದುವರೆಗೆ 1,97,34,823 ಮಂದಿ ರೋಗಮುಕ್ತಿ ಹೊಂದಿದ್ದಾರೆ.

ಸದ್ಯ ದೇಶದಲ್ಲೀಗ 37,10,525 ಸಕ್ರಿಯ ಪ್ರಕರಣಗಳಿವೆ. 2,58,317 ಮಂದಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: 

ಅಂತೆಯೇ ಕಳೆದೊಂದು ದಿನದಲ್ಲಿ 3,52,181 ಮಂದಿ ಚೇತರಿಕೆಯನ್ನು ಹೊಂದಿದ್ದಾರೆ. 
 

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ವರದಿ ಪ್ರಕಾರ, ಮೇ 12ರ ವರೆಗೆ 30,94,48,585 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇದರಲ್ಲಿ ಬುಧವಾರದಂದು 18,64,594 ಮಾದರಿಗಳು ಸೇರಿವೆ.

 

ದೇಶದಾದ್ಯಂತ ಈ ವರೆಗೆ 17,72,14,256 ಕೋವಿಡ್ ಲಸಿಕೆಯ ಡೋಸ್ ವಿತರಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು