Covid-19 India Update: 29,398 ಹೊಸ ಪ್ರಕರಣ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 29,398 ಹೊಸ ಕೋವಿಡ್–19 ಪ್ರಕರಣಗಳು ವರದಿಯಾಗಿದ್ದು, 414 ಸೋಂಕಿತರು ಮೃತಪಟ್ಟಿದ್ದಾರೆ. ಹೀಗಾಗಿ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 97,96,770ಕ್ಕೆ ಏರಿಯಾಗಿದ್ದು, ಸಾವಿನ ಸಂಖ್ಯೆ 1,42,186ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಇಲಾಖೆ ತಿಳಿಸಿದೆ.
ಗುರುವಾರ 37,528 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಸೋಂಕಿನಿಂದ ಒಟ್ಟು 92,90,834 ಮಂದಿ ಗುಣಮುಖರಾದಂತಾಗಿದೆ. ಉಳಿದಂತೆ ಇನ್ನೂ 3,63,749 ಸಕ್ರಿಯ ಪ್ರಕರಣಗಳಿವೆ.
With 29,398 new #COVID19 infections, India's total cases rise to 97,96,770.
With 414 new deaths, toll mounts to 1,42,186 .Total active cases at 3,63,749
Total discharged cases at 92,90,834 with 37,528 new discharges in the last 24 hours pic.twitter.com/GEQpc3AkSv
— ANI (@ANI) December 11, 2020
ಐಸಿಎಂಆರ್ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 8,72,497 ಜನರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, ಈವರೆಗೆ ಒಟ್ಟು 15,16,32,223 ಮಾದರಿ ಪರೀಕ್ಷೆ ನಡೆಸಲಾಗಿದೆ.
📍#COVID19 testing status update:@ICMRDELHI stated that 15,16,32,223 samples tested upto December 10, 2020.
8,72,497 samples tested on December 10, 2020. #StaySafe #IndiaWillWin #Unite2FightCorona pic.twitter.com/kjAreMlhCV
— #IndiaFightsCorona (@COVIDNewsByMIB) December 11, 2020
ಸದ್ಯ ಮಹಾರಾಷ್ಟ್ರದಲ್ಲಿ 73,001 ಸಕ್ರಿಯ ಪ್ರಕರಣಗಳಿವೆ. ಕೇರಳದಲ್ಲಿ 59,663, ಕರ್ನಾಟಕದಲ್ಲಿ 19,225, ದೆಹಲಿಯಲ್ಲಿ 18,753, ಪಶ್ಚಿಮ ಬಂಗಾಳದಲ್ಲಿ 23,451 ಹಾಗೂ ಉತ್ತರ ಪ್ರದೇಶದಲ್ಲಿ 20,801 ಸಕ್ರಿಯ ಪ್ರಕರಣಗಳಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.