ಗುರುವಾರ , ಜನವರಿ 21, 2021
18 °C

Covid-19 India Update: 98 ಲಕ್ಷಕ್ಕೂ ಹೆಚ್ಚು ಕೋವಿಡ್–19 ಸೋಂಕಿತರು ಚೇತರಿಕೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Covid-19

ನವದೆಹಲಿ: ದೇಶದಾದ್ಯಂತ ಈವರೆಗೆ 98,83,461 ಮಂದಿ ಕೊರೊನಾ ವೈರಸ್‌ ಸೋಂಕಿತರು ಗುಣಮುಖರಾಗಿದ್ದಾರೆ. 24 ಗಂಟೆ ಅವಧಿಯಲ್ಲಿ 23,181 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಹೊಸದಾಗಿ 20,036 ಪ್ರಕರಣಗಳು ದೃಢಪಟ್ಟಿದ್ದು, 256 ಸೋಂಕಿತರು ಅಸುನೀಗಿದ್ದಾರೆ. ಇದರೊಂದಿಗೆ, ಈವರೆಗೆ ಸೋಂಕು ತಗುಲಿದವರ ಒಟ್ಟು ಸಂಖ್ಯೆ 1,02,86,710 ಆಗಿದೆ. ಮೃತಪಟ್ಟವರ ಸಂಖ್ಯೆ 1,48,994ಕ್ಕೆ ಏರಿಕೆಯಾಗಿದೆ.

ಡಿಸೆಂಬರ್ 31ರ ವರೆಗೆ ದೇಶದಾದ್ಯಂತ 17.31 ಕೋಟಿಗೂ ಹೆಚ್ಚು ಕೊರೊನಾ ಪರೀಕ್ಷೆ ನಡೆಸಲಾಗಿದೆ. ಗುರುವಾರ 10,62,420 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.

ಇದನ್ನೂ ಓದಿ: 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು