Covid-19 India Update | ಅತಿಹೆಚ್ಚು ಸೋಂಕು ಪ್ರಕರಣ: 2ನೇ ಸ್ಥಾನಕ್ಕೇರಿದ ಭಾರತ

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 90,802 ಕೋವಿಡ್–19 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 42,04,614 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇದರೊಂದಿಗೆ ಭಾರತವು ಹೆಚ್ಚು ಸೋಂಕು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿ ಎರಡನೇ ಸ್ಥಾನಕ್ಕೇರಿದೆ.
ಇಲಾಖೆಯ ಮಾಹಿತಿ ಪ್ರಕಾರ ಭಾನುವಾರ 1,016 ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಒಟ್ಟು ಸಾವಿನ ಸಾವಿನ ಸಂಖ್ಯೆ 71,642ಕ್ಕೆ ತಲುಪಿದೆ. ಇದುವರೆಗೆ 32,50,429 ಸೋಂಕಿತರು ಗುಣುಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, 8,82,542 ಪ್ರಕರಣಗಳು ಸಕ್ರಿಯವಾಗಿವೆ.
ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಮಾಹಿತಿ ಪ್ರಕಾರ ಅಮೆರಿದಲ್ಲಿ ಈವರೆಗೆ 62,76,421 ಪ್ರಕರಣಗಳು ವರದಿಯಾಗಿದ್ದು, ಹೆಚ್ಚು ಸೋಂಕು ಪ್ರಕರಣಗಳಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿ 1,88,941 ಸೋಂಕಿತರು ಮೃತಪಟ್ಟಿದ್ದು, 23,15,995 ಮಂದಿ ಗುಣಮುಖರಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ 41,37,521 ಜನರಿಗೆ ಸೋಂಕು ತಗುಲಿದ್ದು, 35,22,155 ಜನರು ಗುಣಮುಖರಾಗಿದ್ದಾರೆ. ಉಳಿದಂತೆ 1,26,650 ಸೋಂಕಿತರು ಮೃತಪಟ್ಟಿದ್ದಾರೆ.
India's #COVID19 case tally crosses 42 lakh mark with a spike of 90,802 new cases & 1,016 deaths reported in the last 24 hours.
The total case tally stands at 42,04,614 including 8,82,542 active cases, 32,50,429 cured/discharged/migrated & 71,642 deaths: Ministry of Health pic.twitter.com/TKc9rQKwoc— ANI (@ANI) September 7, 2020
4.95 ಕೋಟಿ ಜನರಿಗೆ ಕೋವಿಡ್ ಪರೀಕ್ಷೆ
ಸೆಪ್ಟೆಂಬರ್ 6 ರಂದು ದೇಶದಾದ್ಯಂತ 7,20,362 ಜನರಿಗೆ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗಿದೆ. ಇದರೊಂದಿಗೆ ಈವರೆಗೆ ಒಟ್ಟು 4,95,51,507 ಮಂದಿಗೆ ಕೋವಿಡ್–19 ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಾಹಿತಿ ನೀಡಿದೆ.
Total number of samples tested up to 6th September is 4,95,51,507 including 7,20,362 samples tested yesterday: Indian Council of Medical Research#COVID19 pic.twitter.com/N3b2JfCHu8
— ANI (@ANI) September 7, 2020
ಚೇತರಿಕೆ ಪ್ರಮಾಣದಲ್ಲಿ ಏರಿಕೆ
ದೇಶದಾದ್ಯಂತ ಕೋವಿಡ್–19 ಸೋಂಕಿತರ ಚೇತರಿಕೆ ಪ್ರಮಾಣವು ಶೇ.77.31ಕ್ಕೆ ಏರಿಯಾಗಿದೆ. ಸೆಪ್ಟೆಂಬರ್ 5ರಂದು ಈ ಪ್ರಮಾಣವು ಶೇ.77.23 ರಷ್ಟಿತ್ತು. ಅದೇ ರೀತಿ ಸಾವಿನ ಪ್ರಮಾಣ ಶೇ.1.73ರಿಂದ ಶೇ.1.70ಗೆ ಇಳಿದಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಮಹಾರಾಷ್ಟ್ರದಲ್ಲಿ 9 ಲಕ್ಷ ದಾಟಿದ ಸೋಂಕಿತರ ಸಂಖ್ಯೆ
ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಇದುವರೆಗೆ 9,07,212 ಪ್ರಕರಣಗಳು ವರದಿಯಾಗಿದ್ದು, 6,44,400 ಮಂದಿ ಗುಣಮುಖರಾಗಿದ್ದಾರೆ. 26,604 ಸೋಂಕಿತರು ಮೃತಪಟ್ಟಿದ್ದು, ಇನ್ನೂ 2,36,208 ಪ್ರಕರಣಗಳು ಸಕ್ರಿಯವಾಗಿವೆ.
ತಮಿಳುನಾಡಿನಲ್ಲಿ 4,63,480ಜನರಿಗೆ ಸೋಂಕು ತಗುಲಿದೆ. ಇದುವರೆಗೆ 4,04,186 ಸೋಂಕಿತರು ಗುಣುಮುಖರಾಗಿದ್ದಾರೆ. 7,836 ಮಂದಿ ಸಾವಿಗೀಡಾಗಿದ್ದು, ಇನ್ನೂ 51,458 ಪ್ರಕರಣಗಳು ಸಕ್ರಿಯವಾಗಿವೆ.
ಆಂಧ್ರ ಪ್ರದೇಶದಲ್ಲಿ 4,98,125 ಪ್ರಕರಣಗಳು ವರದಿಯಾಗಿವೆ. 3,94,019 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. 99,689 ಪ್ರಕರಣಗಳು ಸಕ್ರಿಯವಾಗಿದ್ದು, 4,417 ಮಂದಿ ಸಾವಿಗೀಡಾಗಿದ್ದಾರೆ. ರಾಜಧಾನಿ ದೆಹಲಿಯಲ್ಲಿ 1,91,449 ಮಂದಿಗೆ ಸೋಂಕು ತಗುಲಿದೆ. ಇದರಲ್ಲಿ 1,65,973 ಸೋಂಕಿತರು ಗುಣಮುಖರಾಗಿದ್ದಾರೆ. ಇನ್ನೂ 20,909 ಪ್ರಕರಣಗಳು ಸಕ್ರಿಯವಾಗಿದ್ದು, 4,567 ಸೋಂಕಿತರು ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದಲ್ಲಿ 2,66,283 ಮಂದಿಗೆ ಸೋಂಕು ತಗುಲಿದೆ. ಇದರಲ್ಲಿ 2,00,738 ಸೋಂಕಿತರು ಗುಣಮುಖರಾಗಿದ್ದಾರೆ. ಇನ್ನೂ 61,625 ಪ್ರಕರಣಗಳು ಸಕ್ರಿಯವಾಗಿದ್ದು, 3,920 ಸೋಂಕಿತರು ಮೃತಪಟ್ಟಿದ್ದಾರೆ.
ಕರ್ನಾಟಕದಲ್ಲಿ 4 ಲಕ್ಷದತ್ತ ಕೋವಿಡ್ ಸಂಖ್ಯೆ
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಸೆಪ್ಟೆಂಬರ್ 7ರ ಬೆಳಗ್ಗೆ 8ರ ವರೆಗೆ ಒಟ್ಟು 3,98,551 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ, 2,92,873 ಸೋಂಕಿತರು ಗುಣಮುಖರಾಗಿದ್ದು, ಇನ್ನೂ 99,285 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 6,393 ಆಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.