ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Updates: 781ಕ್ಕೇರಿದ ಓಮೈಕ್ರಾನ್ ಸೋಂಕಿತರ ಸಂಖ್ಯೆ

Last Updated 29 ಡಿಸೆಂಬರ್ 2021, 5:36 IST
ಅಕ್ಷರ ಗಾತ್ರ

ನವದೆಹಲಿ: 24 ಗಂಟೆಗಳಲ್ಲಿ ದೇಶದಲ್ಲಿ 9,195 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಈ ವರೆಗೆ 781 ಓಮೈಕ್ರಾನ್‌ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

ಈ ಮೂಲಕ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 77,002ಕ್ಕೆ ಏರಿದೆ.

ಇದೇ ಅವಧಿಯಲ್ಲಿ 302 ಮಂದಿ ಸೋಂಕಿತರು ಮೃತಪಟ್ಟಿದ್ದು, ಕೋವಿಡ್‌ನಿಂದ ಸಾವಿಗೀಡಾದವರ ಒಟ್ಟು ಸಂಖ್ಯೆ4,80,592ಕ್ಕೆ ಏರಿದೆ.

ದೆಹಲಿಯಲ್ಲಿ ಓಮೈಕ್ರಾನ್‌ನ 238 ಪ್ರಕರಣಗಳಿದ್ದು, ದೇಶದಲ್ಲೇ ಅತ್ಯಧಿಕವಾಗಿದೆ. 167 ಪ್ರಕರಣಗಳೊಂದಿದೆ ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಈವರೆಗೆ 143 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ.

ದೇಶದಲ್ಲಿ ಕೊರೊನಾ ಚೇತರಿಕೆ ಪ್ರಮಾಣ ಶೇಕಡ 98.40ಕ್ಕೆ ಏರಿದ್ದು, ಮಾರ್ಚ್ 2020ರಿಂದೀಚೆಗೆ ಅತ್ಯಂತ ಹೆಚ್ಚಿನದ್ದಾಗಿದೆ.

24 ಗಂಟೆಗಳ ಅವಧಿಯಲ್ಲಿ 7,347 ಮಂದಿ ಕೋವಿಡ್‌ನಿಂದ ಚೇತರಿಕೆ ಕಂಡಿದ್ದು, ದೈನಂದಿನ ಕೋವಿಡ್ ದೃಢ ಪ್ರಮಾಣ 0.79ರಷ್ಟಾಗಿದೆ.

ಕಳೆದ ವಾರ ಜಾಗತಿಕವಾಗಿ ಕೋವಿಡ್-19 ಪ್ರಕರಣಗಳ ಸಂಖ್ಯೆಯು ಶೇಕಡ 11 ರಷ್ಟು ಹೆಚ್ಚಿದ ನಂತರ ಓಮೈಕ್ರಾನ್ ರೂಪಾಂತರದಿಂದ ಉಂಟಾಗುವ ಅಪಾಯವು ಇನ್ನೂ ‘ಅತಿ ಹೆಚ್ಚಾಗಿದೆ’ಎಂದು ವಿಶ್ವ ಆರೋಗ್ಯ ಸಂಸ್ಥೆ ಇಂದು ಹೇಳಿದೆ. ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಕ್ಷಿಪ್ರ ಏರಿಕೆ ಹಿಂದೆ ಓಮೈಕ್ರಾನ್ ತಳಿಯ ಪ್ರಭಾವ ಇದೆ, ಈಗಾಗಲೇ ಅದು ಪ್ರಬಲವಾದ ಡೆಲ್ಟಾ ರೂಪಾಂತರವನ್ನು ಹಿಂದಿಕ್ಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಸಾಪ್ತಾಹಿಕ ವರದಿಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT