ಭಾನುವಾರ, ಅಕ್ಟೋಬರ್ 2, 2022
20 °C

ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆ: ಪರೀಕ್ಷೆ ಯಶಸ್ವಿ

ಪಿಟಿಐ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆಯಲ್ಲಿ (ಕ್ಲಿನಿಕಲ್‌ ಟ್ರಯಲ್‌) ಮೂಗಿನ ಮೂಲಕ ನೀಡುವ ಕೋವಿಡ್  ಲಸಿಕೆಯು (ಬಿಬಿವಿ154) ಸುರಕ್ಷಿತ ಎಂಬ ವರದಿ ಬಂದಿದೆ ಎಂದು ಭಾರತ್‌ ಬಯೋಟೆಕ್‌ ಇಂಟರ್‌ನ್ಯಾಷನಲ್‌ ಲಿ. (ಬಿಬಿಐಎಲ್‌) ಸೋಮವಾರ ಹೇಳಿದೆ.

‌ಮೊದಲನೇ ಮತ್ತು ಎರಡನೇ ಹಂತದ ಪ್ರಾಯೋಗಿಕ ಪರೀಕ್ಷೆಯಲ್ಲೂ ಲಸಿಕೆಯು ಸುರಕ್ಷಿತ ಎಂಬ ವರದಿ ಬಂದಿತ್ತು. ಕಡಿಮೆ ಮತ್ತು ಮಧ್ಯಮ ಆದಾಯ ದೇಶಗಳಿಗಾಗಿ ಮೂಗಿನ ಮೂಲಕ ನೀಡುವ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪೆನಿಯು ಪತ್ರಿಕಾ ಹೇಳಿಕೆಯಲ್ಲಿ ಹೇಳಿದೆ.

' ಸ್ವಾತಂತ್ರ್ಯ ದಿವಸದಂದು ಯಶಸ್ವಿ ಪ್ರಾಯೋಗಿಕ ಪರೀಕ್ಷೆಗಳ ಕುರಿತು ಮಾಹಿತ ಹಂಚಿಕೊಳ್ಳಲು ಬಹಳ ಸಂತೋಷವಾಗುತ್ತಿದೆ’ ಎಂದು ಭಾರತ್‌ ಬಯೋಟೆಕ್‌ ಜಂಟಿ ನಿರ್ವಾಹಕ ನಿರ್ದೇಶಕಿ ಸುಚಿತ್ರ ಕೆ. ಎಲಾ ಹೇಳಿದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು