ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಮೂರೂವರೆ ವರ್ಷದ ಮಗು ಸೇರಿ 7 ಮಂದಿಗೆ ಓಮೈಕ್ರಾನ್

Last Updated 10 ಡಿಸೆಂಬರ್ 2021, 16:26 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದಲ್ಲಿಮೂರೂವರೆ ವರ್ಷದ ಮಗು ಸೇರಿ ಒಟ್ಟು ಏಳು ಜನರಿಗೆ ಇಂದು (ಶುಕ್ರವಾರ) ಓಮೈಕ್ರಾನ್‌ ಸೋಂಕು ದೃಢಪಟ್ಟಿದೆ.ಇದರಲ್ಲಿ ಮೂರು ಪ್ರಕರಣಗಳು ಮುಂಬೈನಲ್ಲಿ ಮತ್ತು ಉಳಿದ ನಾಲ್ಕು ಪ್ರಕರಣಗಳು ಪಿಂಪ್ರಿ ಚಿಂಚ್‌ವಾಡಾ ನಗರದಲ್ಲಿ ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದರೊಂದಿಗೆ ರಾಜ್ಯದಲ್ಲಿ ಇದುವರೆಗೆ ವರದಿಯಾದ ಓಮೈಕ್ರಾನ್ ಪ್ರಕರಣಗಳ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.

ಮುಂಬೈನ ಮೂವರೂ ಸೋಂಕಿತರು ಅಂತರರಾಷ್ಟ್ರೀಯ ಪ್ರಯಾಣ ಮಾಡಿದವರಾಗಿದ್ದಾರೆ. 48 ವರ್ಷದ ವ್ಯಕ್ತಿ ತಾಂಜೇನಿಯಾದಿಂದ, 25 ವರ್ಷದ ವ್ಯಕ್ತಿ ಇಂಗ್ಲೆಂಡ್‌ನಿಂದ ಮತ್ತು 37 ವರ್ಷದ ವ್ಯಕ್ತಿ ದಕ್ಷಿಣ ಆಫ್ರಿಕಾದಿಂದ ಬಂದವರಾಗಿದ್ದಾರೆ.

ಪಿಂಪ್ರಿಯಲ್ಲಿ ಸೋಂಕಿತರಾಗಿರುವ ನಾಲ್ವರು, ಓಮೈಕ್ರಾನ್‌ ದೃಢಪಟ್ಟಿದ್ದ ನೈಜೀರಿಯಾ ಮಹಿಳೆಯ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದೆ.

ಈ ಏಳು ಸೋಂಕಿತರ ಪೈಕಿ ಮಗು ಹೊರತುಪಡಿಸಿ, ನಾಲ್ವರು ಎರಡು ಡೋಸ್‌ ಮತ್ತು ಒಬ್ಬರು ಒಂದು ಡೋಸ್‌ ಲಸಿಕೆ ಪಡೆದುಕೊಂಡಿದ್ದರು. ಇನ್ನೊಬ್ಬರು ಲಸಿಕೆ ಪಡೆದಿರಲಿಲ್ಲ.

ಸೋಂಕು ದೃಢಪಟ್ಟಿದ್ದರೂ, ನಾಲ್ವರಲ್ಲಿ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಮೂವರಲ್ಲಷ್ಟೇ ಸೌಮ್ಯ ಲಕ್ಷಣಗಳು ಗೋಚರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT