ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷದಿಂದಲೇ ಕೋವಿಡ್-19 ಲಸಿಕೆ ನೀಡಿಕೆ: ಹರ್ಷ ವರ್ಧನ್

Last Updated 21 ಡಿಸೆಂಬರ್ 2020, 5:51 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಹೊಸ ವರ್ಷದಿಂದಲೇ ಕೋವಿಡ್-19 ಲಸಿಕೆ ವಿತರಣೆ ಆರಂಭವಾಗಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಮಾಹಿತಿ ನೀಡಿದರು.

ಕೊರೊನಾ ವೈರಸ್ ಲಸಿಕೆಯ ಸುರಕ್ಷತೆ ಹಾಗೂ ಪರಿಣಾಮಕಾರಿತ್ವದ ಮಹತ್ವವನ್ನು ಸಾರಿರುವ ಹರ್ಷ ವರ್ಧನ್, ಜನವರಿ ತಿಂಗಳಲ್ಲಿ ಯಾವುದೇ ವಾರ ಬೇಕಾದರೂ ದೇಶದ ಜನತೆಗೆ ಲಸಿಕೆ ನೀಡಲು ಸಿದ್ಧವಾಗಬಹುದು ಎಂದು ಹೇಳಿದರು.

ಕೋವಿಡ್-19 ಲಸಿಕೆಯ ಸುರಕ್ಷತೆಯಲ್ಲಿ ಯಾವುದೇ ರಾಜಿಗೆ ಸರಕಾರ ಸಿದ್ಧವಿಲ್ಲ. ರಾಜ್ಯ ಸರ್ಕಾರಗಳ ಜೊತೆ ಸೇರಿಕೊಂಡು ಕೇಂದ್ರ ಸರಕಾರವು ಕಳೆದ ನಾಲ್ಕು ತಿಂಗಳುಗಳಿಂದ ರಾಜ್ಯ, ಜಿಲ್ಲೆ ಮತ್ತು ಬ್ಲಾಕ್ ಮಟ್ಟಗಳಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಹರ್ಷ ವರ್ಧನ್ ವಿವರಿಸಿದರು.

ಅತಿ ಹೆಚ್ಚು ಕೊರೊನಾವೈರಸ್ ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಅಮೆರಿಕ ಬಳಿಕ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಒಂದು ಕೋಟಿಗೂ ಅಧಿಕ ಪ್ರಕರಣಗಳು ದಾಖಲಾಗಿದೆ. ಅಮೆರಿಕದಲ್ಲಿ ಈಗಾಗಲೇ ಫೈಜರ್-ಬಯೋಎನ್‌ಟೆಕ್ ಹಾಗೂ ಮಾರ್ಡನಾ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ದೊರಕಿದೆ.

ಭಾರತದಲ್ಲೂ ಅತ್ಯುನ್ನತ ವಿಜ್ಞಾನಿಗಳು ಮತ್ತು ಆರೋಗ್ಯ ತಜ್ಞರು ಕೆಲಸದಲ್ಲಿ ನಿರತವಾಗಿದ್ದು, ಮುಂಬರುವ ಆರರಿಂದ ಏಳು ತಿಂಗಳಲ್ಲಿ ಸುಮಾರು 30 ಕೋಟಿ ಜನರಿಗೆ ಲಸಿಕೆ ನೀಡುವ ಸಾಮರ್ಥ್ಯವನ್ನು ದೇಶ ಹೊಂದಲಿದೆ ಎಂದವರು ಹೇಳಿದರು.

ಜಗತ್ತಿನಲ್ಲೇ ಭಾರತವು ಅತಿ ಹೆಚ್ಚು ಚೇತರಿಕೆ ಪ್ರಮಾಣವನ್ನು ಹೊಂದಿದ್ದು, ಶೇ. 95.46ರಷ್ಟಿದೆ. ಹಾಗೆಯೇ ಆರು ಲಸಿಕೆಗಳು ವಿವಿಧ ಕ್ಲಿನಿಕಲ್ ಪ್ರಯೋಗದ ಹಂತದಲ್ಲಿದ್ದು, ಈ ಪೈಕಿ ನಾಲ್ಕು ಲಸಿಕೆಗಳನ್ನು ದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT