ಗುರುವಾರ , ಮೇ 13, 2021
40 °C

ಕೋವಿಡ್ ಲಸಿಕೆ ನೀತಿಯಲ್ಲಿ ತಾರತಮ್ಯ: ರಾಹುಲ್ ಆಕ್ರೋಶ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘18 ರಿಂದ 45 ವರ್ಷದೊಳಗಿನವರಿಗೆ ಉಚಿತವಾಗಿ ಕೋವಿಡ್‌ ಲಸಿಕೆ ನೀಡದ ಕೇಂದ್ರ ಸರ್ಕಾರ, ದುರ್ಬಲ ವರ್ಗದವರಿಗೆ ಲಸಿಕೆ ಸಿಗುವ ಖಾತರಿ ಇಲ್ಲದಂತೆ ಮಾಡಿ, ‘ಕೋವಿಡ್ ಲಸಿಕೆ ನೀತಿ‘ಯಲ್ಲಿ ತಾರಮ್ಯ ಎಸಗುತ್ತಿದೆ‘ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಈ ಕುರಿತು ಮಂಗಳವಾರ ಟ್ವೀಟ್ ಮಾಡಿರುವ ಅವರು, ‘ಕೋವಿಡ್‌ ಲಸಿಕೆಗಳ ಮೇಲೆ ಬೆಲೆ ನಿಯಂತ್ರಣವಿಲ್ಲದೇ, ಮಧ್ಯವರ್ತಿಗಳಿಗೆ ಲಸಿಕೆ ಖರೀದಿಗೆ ಅವಕಾಶ ನೀಡಿದೆ. ಹೀಗಾಗಿ ದುರ್ಬಲ ವರ್ಗದವರಿಗೆ ಲಸಿಕೆಗಳು ಉಚಿತವಾಗಿ ಸಿಗದೇ, ಅವರನ್ನು ನಿರ್ಲಕ್ಷ್ಯಿಸಲಾಗಿದೆ. ಕೇಂದ್ರ ಸರ್ಕಾರ ಲಸಿಕೆಯನ್ನೂ ಪೂರೈಸಲು ಕಾರ್ಯತಂತ್ರ ರೂಪಿಸುತ್ತಿಲ್ಲ, ಬದಲಿಗೆ ತಾರತಮ್ಯ ಮಾಡುತ್ತಿದೆ‘ ಎಂದು ಹೇಳಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು