ಮಂಗಳವಾರ, ಜೂನ್ 28, 2022
21 °C

ಲಸಿಕೆ ವಿತರಣೆ: ಮೇನಲ್ಲಿ ಕಳಪೆ ಸಾಧನೆಗೆ ರಾಜ್ಯಗಳೇ ಹೊಣೆ ಎಂದ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮೇ ತಿಂಗಳಿನಲ್ಲಿ ಕೋವಿಡ್‌–19 ಲಸಿಕೆ ನೀಡುವಲ್ಲಿನ ಕಳಪೆ ಸಾಧನೆಗೆ ರಾಜ್ಯಗಳೇ ಕಾರಣ ಎಂಬುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಹೇಳಿದೆ.

‘ಮೇ ತಿಂಗಳ ಅಂತ್ಯಕ್ಕೆ ರಾಜ್ಯಗಳ ಬಳಿ ಲಸಿಕೆಯ 1.6 ಕೋಟಿ ಡೋಸ್‌ಗಳಿದ್ದವು’ ಎಂದೂ ಸಚಿವಾಲಯ ಹೇಳಿದೆ. ಆ ಮೂಲಕ, ಅಗತ್ಯ ಪ್ರಮಾಣದ ಡೋಸ್‌ಗಳಷ್ಟು ಲಸಿಕೆ ಇದ್ದರೂ, ರಾಜ್ಯಗಳು ನೀಡುವಲ್ಲಿ ವಿಫಲವಾಗಿವೆ ಎಂದು ಸೂಚ್ಯವಾಗಿ ಸಚಿವಾಲಯ ರಾಜ್ಯಗಳನ್ನೇ ದೂಷಿಸಿದೆ.

‘ಮೇ 1ರಿಂದ 31ರ ವರೆಗಿನ ಅವಧಿಯಲ್ಲಿ ಒಟ್ಟು 7.9 ಕೋಟಿ ಡೋಸ್‌ಗಳಷ್ಟು ಲಸಿಕೆ ಲಭ್ಯ ಇತ್ತು. ಈ ಪೈಕಿ 6.1 ಕೋಟಿ ಡೋಸ್‌ಗಳಷ್ಟು ಲಸಿಕೆಯನ್ನು ಹಾಕಲಾಗಿದೆ. ಇನ್ನೂ ಅಂದಾಜು 1.6 ಕೋಟಿ ಡೋಸ್‌ಗಳಷ್ಟು ಲಸಿಕೆ ಬಳಕೆಯಾಗದೇ ಉಳಿದಿತ್ತು’ ಎಂದು ಸಚಿವಾಲಯ ತಿಳಿಸಿದೆ.

ಕೇಂದ್ರವು ಜೂನ್‌ ತಿಂಗಳಿಗಾಗಿ 12 ಕೋಟಿ ಡೋಸ್‌ಗಳನ್ನು ಒದಗಿಸುವುದಾಗಿ ಭರವಸೆ ನೀಡಿತ್ತು. ಆದರೆ, ಮೇ ತಿಂಗಳಲ್ಲಿ ಲಭ್ಯವಿದ್ದ 7.9 ಕೋಟಿ ಡೋಸ್‌ಗಳ ಪೈಕಿ ಅಂದಾಜು 5.8 ಕೋಟಿ ಡೋಸ್‌ಗಳಷ್ಟು ಲಸಿಕೆಯನ್ನು ಹಾಕಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಚಿವಾಲಯ ಈ ಅಂಕಿ–ಅಂಶಗಳನ್ನು ಬಿಡುಗಡೆ ಮಾಡಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು