ಶುಕ್ರವಾರ, ಜೂನ್ 18, 2021
27 °C

ಲಾಕ್‌ಡೌನ್ ಹಿನ್ನೆಲೆ: ಪೊಲೀಸರ ಮನವೊಲಿಕೆಯಿಂದ 75 ಮದುವೆಗಳ ಮುಂದೂಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಟಾ, ರಾಜಸ್ಥಾನ: ಕೋವಿಡ್‌ ಸೋಂಕು ತಡೆಗೆ ಜಾರಿಗೊಳಿಸಿರುವ ಲಾಕ್‌ಡೌನ್‌ ನಿಯಮಗಳ ಕುರಿತು ಪೊಲೀಸರು ಕುಟುಂಬಗಳ ಮನವೊಲಿಸಿದ ಬಳಿಕ ಇಲ್ಲಿ ಒಂದೇ ದಿನ ಸುಮಾರು 75 ಮದುವೆಗಳನ್ನು ಮುಂದೂಡಲಾಗಿದೆ.

ಕೋಟಾ ಗ್ರಾಮೀಣ ಠಾಣೆ ಮತ್ತು ದಿಗೊಡ್‌ ಪೊಲೀಸ್ ಠಾಣೆಯ ಇಬ್ಬರು ಕಾನ್‌ಸ್ಟೆಬಲ್‌ಗಳು, ಪರಿಶೀಲಾನಾರ್ಥ ಭೇಟಿ ನೀಡಿದ್ದ ಡಿಜಿಐ ರವಿದತ್ ಗೌರ್ ಅವರಿಗೆ ಈ ಮಾಹಿತಿ ನೀಡಿದ್ದಾರೆ. ಇದೇ ತಿಂಗಳು ನಡೆಯಬೇಕಿದ್ದ ಮದುವೆಗಳನ್ನು ಮುಂದೂಡುವಂತೆ ತಾವು ಮೂರು ಕುಟುಂಬಗಳ ಮನವೊಲಿಸಿದ್ದಾಗಿ ತಿಳಿಸಿದ್ದಾರೆ.

‘ಈ ಮೂಲಕ ಲಾಕ್‌ಡೌನ್‌ ನಿಯಮಗಳ ಕಟ್ಟುನಿಟ್ಟಿನ ಜಾರಿಗಾಗಿ ಈ ಇಬ್ಬರು ಕಾನ್‌ಸ್ಟೆಬಲ್‌ಗಳಿಗೆ ತಲಾ ₹ 1,100 ನಗದು ಬಹುಮಾನ ನೀಡಲಾಗಿದೆ’ ಎಂದು ಡಿಎಸ್‌ಪಿ (ಇಟಾವಾ) ವಿಜಯಶಂಕರ್ ಶರ್ಮಾ ಮಾಹಿತಿ ನೀಡಿದ್ದಾರೆ.

‘ಇದೇ ಸಂದರ್ಭದಲ್ಲಿ ಡಿಜಿಐ ಅವರು ಅಧಿಕಾರಿಗಳಿಗೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮುಖಂಡರು ಮತ್ತು ಜನಪ್ರತಿನಿಧಿಗಳ ಸಭೆಯನ್ನು ಕರೆದು ಕುಟುಂಬಗಳ ಜೊತೆಗೆ ಚರ್ಚಿಸಿ ಮನವೊಲಿಸಲು ಸೂಚಿಸಿದ್ದರು. ಅದರಂತೆ ಕ್ರಮಕೈಗೊಂಡಿದ್ದು, ಇದರ ಪರಿಣಾಮ ಒಂದೇ ದಿನ ನಿಗದಿಯಾಗಿದ್ದ ಸುಮಾರು 75 ಮದುವೆಗಳು ಮುಂದೂಡಿಕೆಯಾಗಿವೆ’ ಎಂದು ವಿವರಿಸಿದರು.

ಕೋಟಾ ಗ್ರಾಮೀಣ ಜಿಲ್ಲೆಯ ಎಸ್‌ಪಿ ಶರದ್‌ ಚೌಧರಿ ಅವರು, ಈ ಅಭಿಯಾನವನ್ನು ಶನಿವಾರ ಗ್ರಾಮೀಣ ಭಾಗದಲ್ಲಿ ಕೈಗೊಳ್ಳಲಾಗಿತ್ತು. ಇಬ್ಬರು ಕಾನ್‌ಸ್ಟೆಬಲ್‌ಗಳು, ಠಾಣಾಧಿಕಾರಿ ಕುಟುಂಬಗಳ ಮನವೊಲಿಸಿದರು ಎಂದು ಹೇಳಿದರು.

ನನ್ನ ತಂಗಿಯ ಮದುವೆ ಶುಕ್ರವಾರ ನಡೆಬೇಕಿತ್ತು. ಅದೇ ದಿನ ಬೆಳಿಗ್ಗೆ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸರು ಪರಿಸ್ಥಿತಿ ಕುರಿತು ಮನವೊಲಿಸಿದರು. ಅದರಂತೆ ಮದುವೆ ಮುಂದೂಡಲಾಯಿತು ಎಂದು ರಿಂಕೇಶ್‌ ಕುಮಾರ್ ಅವರು ಪ್ರತಿಕ್ರಿಯಿಸಿದರು.

ರಾಜಸ್ಥಾನ ಸರ್ಕಾರವು, ರಾಜ್ಯದಾದ್ಯಂತ ಮೇ 10 ರಿಂದ 24ರವರೆಗೂ ಕಟ್ಟುನಿಟ್ಟಿನ ಲಾಕ್‌ಡೌನ್‌ ಅನ್ನು ಘೋಷಿಸಿದೆ. ಈ ಅವಧಿಯಲ್ಲಿ ಗರಿಷ್ಠ 11 ಜನರ ಪರಿಸ್ಥಿತಿಯಲ್ಲಿ ಮದುವೆಗಳನ್ನು ನಡೆಸಲು ಅನುಮತಿ ನೀಡಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು