Covid India Update: ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ, ರೋಗದ ದೃಢ ಪ್ರಮಾಣ ಇಳಿಕೆ

ನವದೆಹಲಿ: 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 2,35,532 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 871 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.
ಇದೇ ಅವಧಿಯಲ್ಲಿ 3,35,939 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 20,04,333ಕ್ಕೆ ಏರಿದ್ದು, ಒಟ್ಟು ಸೋಂಕಿತರಲ್ಲಿ ಶೇಕಡ 4.91 ರಷ್ಟು ಸಕ್ರಿಯ ಪ್ರಕರಣಗಳಿವೆ.
India reports 2,35,532 new #COVID19 cases, 871 deaths and 3,35,939 recoveries in the last 24 hours
Active case: 20,04,333 (4.91%)
Daily positivity rate: 13.39%Total Vaccination : 1,65,04,87,260 pic.twitter.com/6X0dxg3LjJ
— ANI (@ANI) January 29, 2022
ದೈನಂದಿನ ಪಾಸಿಟಿವಿಟಿ ದರ ಶೇಕಡ 13.39ರಷ್ಟಿದೆ. ಕೋವಿಡ್ನಿಂದ ಈವರೆಗೆ ದೆಶದಲ್ಲಿ ಒಟ್ಟು 4,93,198 ಮಂದಿ ಸಾವಿಗೀಡಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಹೊಸ ಪ್ರಕರಣಗಳು ಮತ್ತು ರೋಗದ ದೃಢ ಪ್ರಮಾಣ ಕಡಿಮೆಯಾಗಿದೆ. ಗುರುವಾರ 2.85 ಲಕ್ಷ ಪ್ರಕರಣಗಳು ಮತ್ತು ಶುಕ್ರವಾರ 2.51 ಲಕ್ಷ ಪ್ರಕರಣಗಳು ವರದಿಯಾಗಿದ್ದವು.
ದೇಶದಲ್ಲಿ ಈವರೆಗೆ 165 ಕೋಟಿಗೂ ಅಧಿಕ ಡೋಸ್ ಕೋವಿಡ್ ಲಸಿಕೆ ವಿತರಣೆ ಮಾಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.