ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

India Covid Updates: ರಾಷ್ಟ್ರದಲ್ಲಿ 6,990 ಹೊಸ ಪ್ರಕರಣಗಳು ದೃಢ

Last Updated 30 ನವೆಂಬರ್ 2021, 6:28 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರದಲ್ಲಿ ಹೊಸ ಕೋವಿಡ್‌ 19 ಸೋಂಕು ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. 6,990 ಕೊರೊನಾ ಸೋಂಕು ದೃಢ ಪ್ರಕರಣಗಳು ಪತ್ತೆಯಾಗಿದ್ದು 551 ದಿನಗಳಲ್ಲಿ ಇದು ಕನಿಷ್ಠ ಪ್ರಮಾಣವಾಗಿದೆ.

ದೇಶದಾದ್ಯಂತ ಒಟ್ಟಾರೆ ಇದುವರೆಗೆ ಒಟ್ಟು 3,45,87,822 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,00,543ಕ್ಕೆ ಇಳಿದಿದೆ ಎಂದು ಮಂಗಳವಾರ ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ 190 ಮಂದಿ ಕೋವಿಡ್‌ ಕಾರಣದಿಂದ ಮೃತಪಟ್ಟಿದ್ದು, ಈ ಪೈಕಿ ಕೇರಳದ 117 ಮತ್ತು ಮಹಾರಾಷ್ಟ್ರದ 21 ಮಂದಿ ಸೇರಿದ್ದಾರೆ. ಒಟ್ಟಾರೆ ಇದುವರೆಗೆ ನಿಧನರಾದವರ ಸಂಖ್ಯೆ 4,68,980ಕ್ಕೆ ಏರಿಕೆಯಾಗಿದೆ. ಕಳೆದ 53 ದಿನಗಳಲ್ಲಿ ದೈನಂದಿನ ಕೋವಿಡ್‌ ಪ್ರಕರಣಗಳ ಸಂಖ್ಯೆ 20,000 ದಾಟಿಲ್ಲ. ಕಳೆದ 155 ದಿನಗಳಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ 50 ಸಾವಿರ ದಾಟಿಲ್ಲ ಎಂಬುದು ಗಮನಾರ್ಹ.

ಸಕ್ರಿಯ ಪ್ರಕರಣಗಳ ಪ್ರಮಾಣ ಶೇಕಡಾ 0.29ಕ್ಕೆ ಇಳಿಕೆಯಾಗಿದೆ. ಇದು ಮಾರ್ಚ್‌ 2020ರ ನಂತರ ದಾಖಲಾದ ಅತ್ಯಂತ ಕನಿಷ್ಠ ಪ್ರಮಾಣವಾಗಿದೆ. ಕೋವಿಡ್‌ ಸೋಂಕಿನಿಂದ ಗುಣಮುಖರಾದವರ ಪ್ರಮಾಣ ಶೇಕಡಾ 98.35ಕ್ಕೆ ಏರಿಕೆಯಾಗಿದೆ. ಮಾರ್ಚ್‌ 2020ರ ನಂತರ ದಾಖಲಾದ ಅತಿಹೆಚ್ಚಿನ ಪ್ರಮಾಣ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT