ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮೈಕ್ರಾನ್ ವಿರುದ್ಧ ಕೋವಿಶೀಲ್ಡ್ ಬೂಸ್ಟರ್ ಡೋಸ್ ಪರಿಣಾಮಕಾರಿ: ಅಧ್ಯಯನ

Last Updated 23 ಡಿಸೆಂಬರ್ 2021, 11:22 IST
ಅಕ್ಷರ ಗಾತ್ರ

ನವದೆಹಲಿ: ಕೋವಿಶೀಲ್ಡ್ ಲಸಿಕೆಯ ಬೂಸ್ಟರ್ ಡೋಸ್, ಹೊಸ ರೂಪಾಂತರ ತಳಿ ಓಮೈಕ್ರಾನ್ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಪ್ರಯೋಗಾಲಯದ ಅಧ್ಯಯನ ಡೇಟಾವನ್ನು ಉಲ್ಲೇಖಿಸಿ ಔಷಧ ಉತ್ಪಾದಕ ಕಂಪನಿ ಆಸ್ಟ್ರಾಜೆನಿಕಾ ಹೇಳಿದೆ.

ಈ ಅಧ್ಯಯನವು, ಉನ್ನತ ಮೆಡಿಕಲ್ ಜರ್ನಲ್‌ನಲ್ಲಿ ಇನ್ನೂ ಪ್ರಕಟವಾಗಬೇಕಿದೆ. ಕೋವಿಡ್ -19 ಸೋಂಕಿಗೆ ಒಳಗಾದ ಮತ್ತು ಸ್ವಾಭಾವಿಕವಾಗಿ ಚೇತರಿಸಿಕೊಂಡ ಜನರಿಗಿಂತ ಬೂಸ್ಟರ್ ಡೋಸ್ ಪಡೆದವರಲ್ಲಿ ಓಮೈಕ್ರಾನ್ ವಿರುದ್ಧದ ಪ್ರತಿಕಾಯಗಳ ಸಂಖ್ಯೆ ಹೆಚ್ಚಾಗಿರುವುದು ಅಧ್ಯಯನದಲ್ಲಿ ಕಂಡು ಬಂದಿದೆ.

ಲಸಿಕೆಯ ಮೂರು-ಡೋಸ್ ಪಡೆದ ನಂತರ ಓಮೈಕ್ರಾನ್ ಅನ್ನು ನಿಗ್ರಹಿಸುವ ಪ್ರತಿಕಾಯಗಳ ಮಟ್ಟವು, ಎರಡು ಡೋಸ್‌ ಪಡೆದ ಬಳಿಕ ಡೆಲ್ಟಾ ರೂಪಾಂತರದ ವಿರುದ್ಧ ರೂಪುಗೊಂಡಂತೆಯೇ ಇದೆ ಎಂದು ಕಂಪನಿ ಹೇಳಿದೆ.

ಅಧ್ಯಯನ ನಡೆಸಿದ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರು, ಅಸ್ಟ್ರಾಜೆನೆಕಾದೊಂದಿಗೆ ವ್ಯಾಕ್ಸೆವ್ರಿಯಾ ಲಸಿಕೆಯಲ್ಲಿ ಕೆಲಸ ಮಾಡಿದವರಿಂದ ಸ್ವತಂತ್ರರಾಗಿದ್ದಾರೆ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT