ಸಿಪಿಐ(ಎಂ) ಸಮಾರಂಭ: ಚೆನ್ನೈಗೆ ಆಗಮಿಸಿದ ಕ್ಯೂಬಾದ ಅಲೀಡಾ ಗುವೇರಾ

ಚೆನ್ನೈ: ಕ್ಯೂಬಾ ದೇಶದ ಕ್ರಾಂತಿಕಾರಿ ಅರ್ನೆಸ್ಟೊ 'ಚೆ' ಗುವೇರಾ ಅವರ ಪುತ್ರಿ ಅಲೀಡಾ ಗುವೇರಾ ಅವರು ಭಾರತಕ್ಕೆ ಆಗಮಿಸಿದ್ದಾರೆ.
ಇಲ್ಲಿ ನಡೆಯಲಿರುವ ಸಿಪಿಐ(ಎಂ) ರಾಜ್ಯ ಘಟಕದ ಸಮಾವೇಶದಲ್ಲಿ ಅವರು ಭಾಗವಹಿಸಲಿದ್ದಾರೆ.
புரட்சியாளர் சே குவேராவின் மகள் தோழர் Dr. #AleidaGuevara , பேத்தி Prof. #EstefaniaGuevara இருவரும் சென்னை விமான நிலையம் வந்தனர். முற்போக்கு இயக்கங்கள் சார்பாக சிறப்பான வரவேற்பு அளிக்கப்பட்டது. நாளை ராஜா அண்ணாமலை மன்றத்தில் நடக்கவுள்ள நிகழ்வில் பங்கேற்கிறார். pic.twitter.com/r1VnXCvgij
— கே.பாலகிருஷ்ணன் - K Balakrishnan (@kbcpim) January 17, 2023
ತಮಿಳುನಾಡು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಜಿ ಬಾಲಕೃಷ್ಣನ್ ಮತ್ತು ಹಿರಿಯ ನಾಯಕ ಜಿ ರಾಮಕೃಷ್ಣನ್ ಅವರು ‘ಅಲೀಡಾ ಗುವೇರಾ‘ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
ಇಂದು ಅಲೀಡಾ ಅವರು ಸಿಪಿಐ(ಎಂ)ನ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ.
ಇದೇ ಸಮಾರಂಭದಲ್ಲಿ ಡಿಎಂಕೆ ಸಂಸದೆ ಕನಿಮೊಳಿ ಮತ್ತು ಲೋಕಸಭಾ ಸದಸ್ಯ ತಿರುಮಾವಲವನ್ ಭಾಗವಹಿಸಲಿದ್ದಾರೆ ಎಂದು ಸಿಪಿಐ(ಎಂ) ಪಕ್ಷದ ಮೂಲಗಳು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.