ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಯನ್‌ ಖಾನ್‌ ಡ್ರಗ್ಸ್‌ ಪ್ರಕರಣ: ಮತ್ತೆ ಏಳು ಮಂದಿಗೆ ಜಾಮೀನು

Last Updated 30 ಅಕ್ಟೋಬರ್ 2021, 9:57 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟ ಶಾರುಕ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಆರೋಪಿಯಾಗಿರುವ ಐಷಾರಾಮಿ ಹಡಗಿನ ಡ್ರಗ್‌ ಪ್ರಕರಣದಲ್ಲಿನ ಇತರ ಏಳು ಆರೋಪಿಗಳಿಗೆ ಇಲ್ಲಿನ ವಿಶೇಷ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ.

ಎನ್‌ಡಿಪಿಎಸ್‌ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ವಿ.ವಿ.ಪಾಟೀಲ್‌ ಅವರು ಪ್ರಕರಣದ ವಿಚಾರಣೆ ನಡೆಸಿದರು.

ಡ್ರಗ್‌ ಪೆಡ್ಲರ್‌ ಆಚಿತ್‌ ಕುಮಾರ್‌,ನೂಪುರ್ ಸತಿಜಾ, ಗೋಮಿತ್ ಚೋಪ್ರಾ, ಗೋಪಾಲ್ಜಿ ಆನಂದ್, ಸಮೀರ್ ಸೆಹಗಲ್, ಮಾನವ್ ಸಿಂಘಾಲ್ ಮತ್ತು ಭಾಸ್ಕರ್ ಅರೋರಾ ಅವರಿಗೆ ಜಾಮೀನು ನೀಡಲಾಗಿದೆ.

ಇದರೊಂದಿಗೆ ಬಂಧಿತ 20 ಆರೋಪಿಗಳ ಪೈಕಿ ಇದುವರೆಗೆ 12 ಮಂದಿಗೆ ಜಾಮೀನು ದೊರೆತಂತಾಗಿದೆ.

ಆರೋಪಿ ಆರ್ಯನ್‌ ಖಾನ್‌, ಅರ್ಬಾಜ್‌ ಮರ್ಚಂಟ್‌ ಮತ್ತು ಮುನ್ಮುನ್‌ ಧಮೇಚಾ ಅವರಿಗೆ ಬಾಂಬೆ ಹೈಕೋರ್ಟ್‌ ಗುರುವಾರ ಜಾಮೀನು ಮಂಜೂರು ಮಾಡಿತ್ತು.

ಅಕ್ಟೋಬರ್‌ 2 ರಂದು ಎನ್‌ಸಿಬಿ ತಂಡವು ಐಷಾರಾಮಿ ಹಡಿಗಿನ ಮೇಲೆ ದಾಳಿ ನಡೆಸಿ ನಿಷೇಧಿತ ಡ್ರಗ್ಸ್‌ ವಶಪಡಿಸಿಕೊಂಡಿತ್ತು. 22 ದಿನಗಳ ಜೈಲುವಾಸದ ನಂತರ ಆರ್ಯನ್‌ ಖಾನ್‌ ಶನಿವಾರ ಮುಂಬೈನ ಆರ್ಥರ್‌ ರೋಡ್‌ ಜೈಲಿನಿಂದ ಬಿಡುಗಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT