ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಲರ್‌ ಕಳ್ಳಸಾಗಣೆ ಪ್ರಕರಣ:ಸ್ಪೀಕರ್ ಹೇಳಿಕೆ ದಾಖಲು

Last Updated 10 ಏಪ್ರಿಲ್ 2021, 13:19 IST
ಅಕ್ಷರ ಗಾತ್ರ

ತಿರುವನಂತಪುರ: ಡಾಲರ್‌ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಕಸ್ಟಮ್ಸ್‌ ಅಧಿಕಾರಿಗಳು, ರಾಜ್ಯ ವಿಧಾನಸಭೆ ಸ್ಪೀಕರ್ ಪಿ.ಶ್ರೀರಾಮಕೃಷ್ಣನ್‌ ಅವರ ಹೇಳಿಕೆಯನ್ನು ಶನಿವಾರ ಅವರ ನಿವಾಸದಲ್ಲಿ ದಾಖಲಿಸಿದರು.

ಅನಾರೋಗ್ಯದ ಕಾರಣ ನಾನು ಬರಲಾಗದು ಎಂದು ಸ್ಪೀಕರ್ ತನಿಖಾ ಅಧಿಕಾರಿಗಳಿಗೆ ತಿಳಿಸಿದ್ದರು. ‘ಡಾಲರ್‌ ಪ್ರಕರಣಕ್ಕೆ ಸಂಬಂಧಿಸಿದಂತೆಅಧಿಕಾರಿಗಳು ಕೆಲ ವಿವರಣೆ ಬಯಸಿದ್ದು, ಎರಡು ಗಂಟೆ ಕಾಲ ನಿವಾಸದಲ್ಲಿ ಇದ್ದರು. ಸ್ಪೀಕರ್‌ ನೀಡಿದ ಉತ್ತರರಿಂದ ಸಮಾಧಾನಗೊಂಡಿದ್ದಾರೆ‘ ಎಂದು ಕಚೇರಿಯ ಮೂಲಗಳು ತಿಳಿಸಿವೆ.

ಅಧಿಕಾರಿಗಳು ಹಿಂದೆ ಮೂರು ಬಾರಿ ನೋಟಿಸ್‌ ನೀಡಿದ್ದರು. ಆದರೆ, ಸ್ಪೀಕರ್ ಹಾಜರಾಗಿರಲಿಲ್ಲ. ತಿರುವನಂತಪುರ ದಲ್ಲಿರುವ ಯುಎಇ ಕಾನ್ಸುಲೇಟ್‌ನ ಮಾಜಿ ಹಣಕಾಸು ಅಧಿಕಾರಿಯು ಮಸ್ಕಟ್‌ನಿಂದ ಒಮನ್‌ಗೆ 1.9 ಲಕ್ಷ ಡಾಲರ್ (ಸುಮಾರು ₹ 1.30 ಕೋಟಿ) ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT