ಬುಧವಾರ, ಜುಲೈ 28, 2021
21 °C
ವಿವಿಧ ಭಾಗಗಳಲ್ಲಿ ಭಾರಿ ಮಳೆ; ಜನಜೀವನ ಅಸ್ತವ್ಯಸ್ತ l ಪರಿಹಾರ ಕಾರ್ಯಾಚರಣೆಯಲ್ಲಿ 500 ತಂಡಗಳು

ಚಂಡಮಾರುತ: ಜಾರ್ಖಂಡ್‌ನಲ್ಲಿ 8 ಲಕ್ಷ ಮಂದಿಗೆ ತೊಂದರೆ; ಮಕ್ಕಳಿಗೆ ‘ಯಸ್‌’ ಹೆಸರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ರಾಂಚಿ: ಗುರುವಾರ ಬೆಳಿಗ್ಗಿನ ಜಾವ ಹಾದು ಹೋದ ಯಸ್‌ ಚಂಡಮಾರುತದಿಂದಾಗಿ ಜಾರ್ಖಂಡ್‌ನಲ್ಲಿ ಎಂಟು ಲಕ್ಷ ಜನ ತೊಂದರೆಗೆ ಒಳಗಾಗಿದ್ದಾರೆ. ರಾಜಧಾನಿ ರಾಂಚಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ.

15 ಸಾವಿರ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಖಾರ್‌ಖಾಯ್‌ ಮತ್ತು ಸುವರ್ಣರೇಖಾ ಸೇರಿ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹಾಗಾಗಿ, ಪೂರ್ವ ಸಿಂಘ್‌ಭೂಮ್‌ ಜಿಲ್ಲೆಯಲ್ಲಿ ಜನರ ಸ್ಥಳಾಂತರ ಕಾರ್ಯಾಚರಣೆ ಗುರುವಾರವೂ ನಡೆದಿದೆ.ಜಾರ್ಖಂಡ್‌ನಲ್ಲಿ ಗುರುವಾರ ಮತ್ತು ಶುಕ್ರವಾರ ಪೂರ್ಣ ಲಾಕ್‌ಡೌನ್‌ ಘೋಷಿಸಲಾಗಿದೆ. 

ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಜಾರ್ಖಂಡ್‌ನಲ್ಲಿ ಚಂಡಮಾರುತವು ಈ ರೀತಿಯ ಪರಿಣಾಮ ಬೀರಿದ್ದು ಇದೇ ಮೊದಲು. 500 ತಂಡಗಳು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ.

ಮಕ್ಕಳಿಗೆ ‘ಯಸ್‌’ ಹೆಸರು: ಯಸ್‌ ಚಂಡಮಾರುತವು ಒಡಿಶಾ ಕರಾವಳಿಯನ್ನು ಅಪ್ಪಳಿಸಿದ ದಿನ ರಾಜ್ಯದಲ್ಲಿ 300ಕ್ಕೂ ಹೆಚ್ಚು ಮಕ್ಕಳು ಜನಿಸಿದ್ದಾರೆ. ಅಂದು ಜನಿಸಿದ ಮಕ್ಕಳಿಗೆ ಚಂಡಮಾರುತದ ಹೆಸರನ್ನೇ ಇರಿಸಲು ಹಲವು ಕುಟುಂಬಗಳು ಮುಂದಾಗಿವೆ. 

ಬುಧವಾರ ಜನಿಸಿದ ತಮ್ಮ ಗಂಡು ಮಗುವಿಗೆ ‘ಯಸ್‌’ಗಿಂತ ಒಳ್ಳೆಯ ಹೆಸರು ಯಾವುದಿದೆ ಎಂದು ಬಾಲಸೋರ್‌ನ ಪರಖಿ ಪ್ರದೇಶದ ನಿವಾಸಿ ಸೋನಾಲಿ ಮೈತಿ ಪ್ರಶ್ನಿಸುತ್ತಾರೆ. ಕೇಂದ್ರಪಾಡ ಜಿಲ್ಲೆಯ ಸರಸ್ವತಿ ಬೈರಾಗಿ ಅವರು ಕೂಡ ಚಂಡಮಾರುತ ಅಪ್ಪಳಿಸಿದ ದಿನವೇ ಜನಿಸಿದ ತಮ್ಮ ಹೆಣ್ಣು ಮಗುವಿಗೆ ‘ಯಸ್‌’ ಎಂದುಹೆಸರಿಟ್ಟಿದ್ದಾರೆ. ಯಸ್ ಎಂಬುದು ಪರ್ಷಿಯಾ ಪದವಾಗಿದ್ದು, ಮಲ್ಲಿಗೆ ಎಂದು ಅರ್ಥ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು