ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಉದ್ಯಮಿಗಳಿಗೆ ವ್ಯಾಜ್ಯದ ನಿವೇಶನ: ಅಳಲು

ಮಾಧ್ಯಮ ಮಿತ್ರರೊಡನೆ ದಲಿತ ಉದ್ದಿಮೆದಾರರ ಸಮಾಲೋಚನೆ
Last Updated 31 ಅಕ್ಟೋಬರ್ 2022, 19:02 IST
ಅಕ್ಷರ ಗಾತ್ರ

ಬೆಂಗಳೂರು: ‘ದಲಿತ ಉದ್ದಿಮೆದಾರರಿಗೆ ಹಂಚಿಕೆಯಾಗಿರುವ ನಿವೇಶನಗಳಿಗೆ ಹೋಗಲು ದಾರಿಯೇ ಇಲ್ಲ. ಕೆಲ ನಿವೇಶನಗಳಲ್ಲಿ ಹಿಂದಿನ ಭೂ ಮಾಲೀಕರು ಮನೆ ಕಟ್ಟುತ್ತಿದ್ದಾರೆ, ಜೋಳ ಬಿತ್ತನೆ ಮಾಡಿದ್ದಾರೆ. ಕೆಐಎಡಿಬಿ ಮಾಡಿರುವ ಯಡವಟ್ಟಿ ನಿಂದ ಉದ್ದಿಮೆ ತೆರೆಯುವ ಕನಸೇ ಕಮರಿ ಹೋಗಿದೆ!’ ಇದು ದಲಿತ ಉದ್ದಿಮೆದಾರರು ತೋಡಿಕೊಂಡ ಅಳಲು.

ಕರ್ನಾಟಕ ದಲಿತ ಉದ್ದಿಮೆ ದಾರರ ಸಂಘ ಆಯೋಜಿಸಿದ್ದ ಮಾಧ್ಯಮ ಮಿತ್ರರೊಡನೆ ದಲಿತ ಉದ್ದಿಮೆದಾರರ ಸಮಾಲೋಚನಾ ಕಾರ್ಯಕ್ರಮದಲ್ಲಿ ಉದ್ಯಮಿಗಳು ತಮ್ಮ ಸಮಸ್ಯೆಗಳನ್ನು ವಿವರಿಸಿದರು.

‘ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೆಐಎಡಿಬಿ ಜಾಗ ಹಂಚಿಕೆ ಮಾಡಿದೆ. ಆದರೆ, ಸ್ಥಳೀಯರು ಜಾಗ ಬಿಟ್ಟುಕೊಡುತ್ತಿಲ್ಲ. ಹಲವು ವರ್ಷಗಳಿಂದ ಈ ಸಮಸ್ಯೆ ನನೆಗುದಿಗೆ ಬಿದ್ದಿದ್ದರೂ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ’ ಎಂದು ಮೈಸೂರು ಜಿಲ್ಲಾ ದಲಿತ ಉದ್ದಿಮೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಹೇಳಿದರು.

‘ಹಾಸನದ ಬ್ಲಾಕ್ –3 ಕೈಗಾರಿಕಾ ಪ್ರದೇಶದಲ್ಲಿ ದಲಿತರಿಗೆ ಮಂಜೂರು ಮಾಡಿದ್ದ ಜಾಗದಲ್ಲಿ ಕೆಎಂಎಫ್ ಕಟ್ಟಡ ನಿರ್ಮಿಸುತ್ತಿದೆ. ಕೆಲವರು ಮನೆ ಕಟ್ಟುತ್ತಿದ್ದರೆ, ಹಲವರು ಜೋಳ ಬಿತ್ತನೆ ಮಾಡಿದ್ದಾರೆ. ಜಾಗ ಬಿಡಿಸಿಕೊಡಬೇಕಾದ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಹಣ ಪಾವತಿಸಲು ವಿಳಂಬ ಮಾಡಿದ ಕಾರಣಕ್ಕೆ ಬಡ್ಡಿ ವಿಧಿಸುತ್ತಿದ್ದಾರೆ’ ಎಂದು ಹಾಸನ ಜಿಲ್ಲಾ ದಲಿತ ಉದ್ದಿಮೆದಾರರ ಸಂಘದ ಅಧ್ಯಕ್ಷ ಪ್ರಸನ್ನ ಮತ್ತು ಕಾರ್ಯಾಧ್ಯಕ್ಷ ಸಂತೋಷ್ ಅಳಲು
ತೋಡಿಕೊಂಡರು. ‘ನೆಲಮಂಗಲದಲ್ಲಿ ಕೈಗಾರಿಕಾ ಪ್ರದೇಶಕ್ಕೆ ಹೋಗಲು ದಾರಿಯೇ ಇಲ್ಲ. ವ್ಯಾಜ್ಯದ ಜಾಗಗಳನ್ನೇ ಹುಡುಕಿ ದಲಿತ ಉದ್ದಿಮೆದಾರರಿಗೆ ಹಂಚಿಕೆ ಮಾಡಲಾಗುತ್ತಿದೆ. ದಲಿತ ಉದ್ದಿಮೆದಾರರು ಎದುರಿಸುತ್ತಿರುವ ಸವಾಲುಗಳ ಬಗ್ಗೆ

ಸಹಾಯಧನ ಹೆಚ್ಚಳಕ್ಕೆ ಆಗ್ರಹ

‘ದಲಿತ ನಿರುದ್ಯೋಗಿಗಳು ವಾಹನಗಳ ಖರೀದಿಗೆ ನೀಡುತ್ತಿದ್ದ ₹5 ಲಕ್ಷ ಸಹಾಯಧನವನ್ನು ಈಗ ₹2 ಲಕ್ಷಕ್ಕೆ ಇಳಿಸಲಾಗಿದೆ. ಇದನ್ನು ಮರಳಿ ಹೆಚ್ಚಿಸಬೇಕು’ ಎಂದು ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ ಆಗ್ರಹಿಸಿದರು.

ಸಹಾಯಧನ ಇಳಿಸಿದ ಬಳಿಕ ಟ್ಯಾಕ್ಸಿಗಾಗಿ ವಾಹನ ಖರೀದಿ ಮಾಡುವ ದಲಿತ ಯುವಕರ ಸಂಖ್ಯೆ ಕಡಿಮೆಯಾಗಿದೆ. ಸಹಾಯಧನ ಸಿಕ್ಕರೆ ದಲಿತ ಯುವಕರು ವಾಹನ
ಮಾಲೀಕರಾಗುತ್ತಾರೆ. ಇಡೀ ಕುಟುಂಬವೇ ಅದನ್ನು ಆಧರಿಸಿ ಜೀವನ ನಿರ್ವಹಿಸುತ್ತದೆ ಎಂದರು.

ಮನವರಿಕೆ ಮಾಡಿಸಲು ಈ ಸಮಾಲೋಚನೆ ಆಯೋಜಿಸಲಾಗಿದೆ’ ಎಂದು ಸಂಘದ ಕಾರ್ಯಾಧ್ಯಕ್ಷ ಸಿ.ಜಿ.ಶ್ರೀನಿವಾಸನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT