ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಪೇರಲೆ ಹಣ್ಣು ಕಿತ್ತನೆಂದು ದಲಿತ ಯುವಕನನ್ನು ಹೊಡೆದು ಕೊಂದರು!

Last Updated 6 ನವೆಂಬರ್ 2022, 15:53 IST
ಅಕ್ಷರ ಗಾತ್ರ

ಲಖನೌ: ಪೇರಲೆ ಹಣ್ಣು ಕಿತ್ತು ತಿಂದನೆಂದು 20 ವರ್ಷದ ಪರಿಶಿಷ್ಟ ಜಾತಿಯ ಯುವಕನನ್ನು ಹೊಡೆದು ಕೊಂದಿರುವ ಆಘಾತಕಾರಿ ಉತ್ತರ ಪ್ರದೇಶದ ಆಲಿಗಢ ಜಿಲ್ಲೆಯಲ್ಲಿ ನಡೆದಿದೆ.

ಮೃತ ಯುವಕನನ್ನು ಓಂ ಪ್ರಕಾಶ್‌ ಎಂದು ಗುರುತಿಸಲಾಗಿದೆ. ಈತ ಜಿಲ್ಲೆಯ ಮನೇನಾ ಗ್ರಾಮದವನು. ಇಲ್ಲಿನ ಹಣ್ಣಿನ ತೋಟದಿಂದಶನಿವಾರ ಪೇರಲೆ ಹಣ್ಣನ್ನು ಕೀಳುತ್ತಿದ್ದ ವೇಳೆ ಕಾವಲುಗಾರರ ಕೈಗೆ ಸಿಕ್ಕಿಬಿದ್ದಿದ್ದ. ಕಾವಲುಗಾರರುಬಡಿಗೆಯಿಂದ ಓಂ ಪ್ರಕಾಶ್‌ನನ್ನು ತೀವ್ರವಾಗಿ ಥಳಿಸಿದ್ದರು. ಪ್ರಜ್ಞೆ ಕಳೆದುಕೊಂಡ ನಂತರ ಸಮೀಪದ ಜಮೀನಿನಲ್ಲಿ ಎಸೆದು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಧ್ಯೆ ಓಂ ಪ್ರಕಾಶ್‌ ಮನೆಗೆ ಬರದ ಕಾರಣ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು. ಹಲವು ತಾಸುಗಳ ಶೋಧದ ನಂತರ ಜಮೀನೊಂದರಲ್ಲಿ ರಕ್ತದ ಮಡುವಿನಲ್ಲಿದ್ದ ಬಿದ್ದ ಓಂ ಪ್ರಕಾಶ್‌ ಪತ್ತೆಯಾಗಿದ್ದ. ಆಸ್ಪತ್ರೆಗೆ ಕೊಂಡೊಯ್ದಾಗ ಆತ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದರು ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಬನ್ವರಿಲಾಲ್‌ ಮತ್ತು ಭೀಮ್‌ಸೇನ್‌ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಇನ್ನಿಬ್ಬರಿಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸ್‌ ಮೂಲಗಳು ಭಾನುವಾರ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT