ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸಿನ ಒಪ‍್ಪಂದ: ಕ್ರಿಮಿನಲ್ ಪ್ರಕರಣ ಮುಚ್ಚಿ ಹಾಕುವುದು ಅಪಾಯಕಾರಿ–ಸುಪ್ರೀಂ

Last Updated 30 ಜುಲೈ 2022, 14:22 IST
ಅಕ್ಷರ ಗಾತ್ರ

ನವದೆಹಲಿ: ಮಾಹಿತಿದಾರ, ಸಂಗಾತಿ, ಪೋಷಕರು, ಮಕ್ಕಳು, ಆರೈಕೆ ನೀಡುವವರು ಅಥವಾ ಇತರರೊಂದಿಗೆ ಹಣಕಾಸಿನ ಒಪ್ಪಂದ ಆಧಾರದ ಮೇಲೆ ಆತ್ಮಹತ್ಯೆ ಪ್ರಚೋದನೆಗಾಗಿ ದಾಖಲಿಸಲಾದ ಎಫ್‌ಐಆರ್ ರದ್ದುಗೊಳಿಸಲಾಗುವುದಿಲ್ಲ ಎಂದು ಶುಕ್ರವಾರ ಸುಪ್ರೀಂ ಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ವಿ. ರಾಮಸುಬ್ರಮಣಿಯನ್ ಅವರ ಪೀಠವು, ಖಾಸಗಿ ಸ್ವರೂಪದಲ್ಲಿಲ್ಲದ, ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುವ ಘೋರ ಅಥವಾ ಗಂಭೀರ ಅಪರಾಧಗಳನ್ನು ಅಪರಾಧಿ ಮತ್ತು ದೂರುದಾರ ಅಥವಾ ಸಂತ್ರಸ್ತರ ನಡುವಿನ ಹೊಂದಾಣಿಕೆಯ ಆಧಾರದ ಮೇಲೆ ರದ್ದುಗೊಳಿಸಲಾಗುವುದಿಲ್ಲ ಎಂದು ಹೇಳಿದೆ.

‘ಕೊಲೆ, ಅತ್ಯಾಚಾರ, ಕಳ್ಳತನ, ಡಕಾಯಿತಿ ಮತ್ತು ಆತ್ಮಹತ್ಯೆಗೆ ಪ್ರಚೋದನೆಯಂತಹ ಅಪರಾಧಗಳು ಖಾಸಗಿ ಅಥವಾ ನಾಗರಿಕ ಸ್ವರೂಪದಲ್ಲಿ ಇರುವುದಿಲ್ಲ. ಅಂತಹ ಅಪರಾಧಗಳು ಸಮಾಜಕ್ಕೆ ವಿರುದ್ಧವಾಗಿವೆ. ಯಾವುದೇ ಸಂದರ್ಭಗಳಲ್ಲಿ ರಾಜಿಯಾದ ಮೇಲೆ ಕಾನೂನು ಕ್ರಮ ರದ್ದುಗೊಳಿಸಲಾಗುವುದಿಲ್ಲ’ ಎಂದು ಪೀಠ ಹೇಳಿದೆ.

2020ರಮಾರ್ಚ್ 1 ರಂದು ತನ್ನ ಪತಿ ಶೈಲೇಶ್‌ಕುಮಾರ್ ಚಿಮನ್‌ಭಾಯ್ ಪಟೇಲ್ ಆತ್ಮಹತ್ಯೆಗೆ ಸಂಬಂಧಿಸಿದ ಎಫ್‌ಐಆರ್ ರದ್ದುಗೊಳಿಸಲು ಅನುಮತಿ ನೀಡಿದ ಗುಜರಾತ್ ಹೈಕೋರ್ಟ್‌ ಆದೇಶದ ವಿರುದ್ಧ ದಾಕ್ಸಾಬೆನ್ ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿದೆ. ಮೃತರ ಸೋದರ ಸಂಬಂಧಿ ಎಂದು ಹೇಳಿಕೊಳ್ಳುವ ವ್ಯಕ್ತಿ ಎಫ್‌ಐಆರ್ ದಾಖಲಿಸಿದ್ದರು ಹಾಗೂ ದೂರುದಾರರು ಮತ್ತು ತಮ್ಮ ನಡುವಿನ ವಿವಾದ ಬಗೆಹರಿದಿರುವುದರಿಂದ ಈ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿ ಮನವಿ ಸಲ್ಲಿಸಿದ್ದನ್ನು ಹೈಕೋರ್ಟ್‌ ಪುರಸ್ಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT