ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಎಎಲ್‌ನಿಂದ 70 ತರಬೇತಿ ವಿಮಾನ ಖರೀದಿ ಒಪ್ಪಂದಕ್ಕೆ ಸಹಿ

Last Updated 7 ಮಾರ್ಚ್ 2023, 20:50 IST
ಅಕ್ಷರ ಗಾತ್ರ

ನವದೆಹಲಿ: ₹6,800 ಕೋಟಿ ಮೊತ್ತದಲ್ಲಿ 70 ತರಬೇತಿ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಜೊತೆ ರಕ್ಷಣಾ ಸಚಿವಾಲಯ ಮಂಗಳವಾರ ಸಹಿ ಹಾಕಿದೆ. ಲಾರ್ಸನ್ ಅಂಡ್ ಟುಬ್ರೊ ಲಿಮಿಟೆಡ್‌ನಿಂದ (ಎಲ್‌ಅಂಡ್‌ಟಿ) ₹3,100 ಕೋಟಿ ಮೊತ್ತದ ಮೂರು ತರಬೇತಿ ನೌಕೆಗಳ ಖರೀದಿ ಒಪ್ಪಂದವನ್ನೂ ಸಚಿವಾಲಯ ಅಂತಿಮಗೊಳಿಸಿದೆ.

ಈ ಎರಡೂ ಖರೀದಿ ಪ್ರಕ್ರಿಯೆಗಳಿಗೆ ಪ್ರಧಾನಿ ನೇತೃತ್ವದ ಭದ್ರತಾ ವ್ಯವಹಾರಗಳ ಸಂಪುಟ ಸಮಿತಿ ಮಾ.1ರಂದು ಅನುಮೋದನೆ ನೀಡಿತ್ತು. ವಿಮಾನಗಳನ್ನು ಮುಂದಿನ ಆರು ವರ್ಷಗಳಲ್ಲಿ ಎಚ್‌ಎಎಲ್ ಪೂರೈಸಲಿದೆ. ವಾಯುಪಡೆಗೆ ಹೊಸದಾಗಿ ಸೇರ್ಪಡೆಯಾಗಿರುವ ಪೈಲಟ್‌ಗಳ ತರಬೇತಿಗೆ ಬೇಕಿರುವ ವಿಮಾನಗಳ ಕೊರತೆಯು ಈ ಒಪ್ಪಂದದಿಂದ ನೀಗಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಎಚ್‌ಟಿಟಿ–40 ತರಬೇತಿ ವಿಮಾನಗಳನ್ನು ವಾಯುಪಡೆಗಾಗಿ ಖರೀದಿ ಮಾಡಲಾಗಿದೆ. ನೌಕೆಗಳು 2026ರ ಬಳಿಕ ನೌಕಾಪಡೆಗೆ ಸೇರ್ಪಡೆಯಾಗಲಿವೆ. ದೇಶೀಯವಾಗಿ ವಿನ್ಯಾಸ ಮಾಡಿ ಅಭಿವೃದ್ಧಿಪಡಿಸಲಾದ ನೌಕೆಗಳನ್ನು ಚೆನ್ನೈನ ಕಟ್ಟುಪಳ್ಳಿ ಹಡಗುಕಟ್ಟೆಯಲ್ಲಿ ನಿರ್ಮಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT