ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೋಟ್ ಬ್ಯಾಂಕ್, ಒಡೆದು ಆಳುವ ರಾಜಕಾರಣದಲ್ಲಿ ನಿರುತ್ಸಾಹಿ ಪಕ್ಷಗಳು: ಜೆ.ಪಿ. ನಡ್ಡಾ

Last Updated 18 ಏಪ್ರಿಲ್ 2022, 7:48 IST
ಅಕ್ಷರ ಗಾತ್ರ

ನವದೆಹಲಿ: ದ್ವೇಷದ ಭಾಷಣ ಮತ್ತು ಕೋಮುಗಲಭೆ ಘಟನೆಗಳ ಬಗ್ಗೆ ಮೋದಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಜಂಟಿ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಪ್ರತಿಕ್ರಿಯಿಸಿದ್ದಾರೆ. 'ನಮ್ಮ ರಾಷ್ಟ್ರದ ಆತ್ಮದ ಮೇಲೆ ನೇರ ದಾಳಿ ನಡೆಸುತ್ತಿವೆ ಮತ್ತು ನಮ್ಮ ಶ್ರಮಶೀಲ ನಾಗರಿಕರ ಮೇಲೆ ದೋಷಾರೋಪಣೆ ಮಾಡುತ್ತಿವೆ' ಎಂದು ಸೋಮವಾರ ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರನ್ನು ಸಬಲೀಕರಣಗೊಳಿಸಲು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ತತ್ವಕ್ಕೆ ಒತ್ತು ನೀಡಿರುವುದರಿಂದ ವಿರೋಧ ಪಕ್ಷಗಳು ಅನುಸರಿಸುತ್ತಿರುವ ‘ವೋಟ್ ಬ್ಯಾಂಕ್ ರಾಜಕಾರಣ, ವಿಭಜಿಸುವ ರಾಜಕೀಯ ಮತ್ತು ಆಯ್ದ ರಾಜಕೀಯದ ಹಳೆಯ ಮತ್ತು ತುಕ್ಕು ಹಿಡಿದ ವಿಧಾನಗಳು ಇನ್ಮುಂದೆ ಕೆಲಸ ಮಾಡುವುದಿಲ್ಲ’ ಎಂದು ಸಹ ಭಾರತೀಯರಿಗೆ ಬರೆದ ಪತ್ರದಲ್ಲಿ ನಡ್ಡಾ ಹೇಳಿದ್ದಾರೆ.

ದುರದೃಷ್ಟವಶಾತ್, ಅಭಿವೃದ್ಧಿ ರಾಜಕಾರಣದತ್ತ ಇರುವ ಈ ಒಲವನ್ನು ತಿರಸ್ಕರಿಸಿರುವ ಈ ಪಕ್ಷಗಳು ಮತ್ತೊಮ್ಮೆ ವೋಟ್ ಬ್ಯಾಂಕ್ ಮತ್ತು ವಿಭಜಕ ರಾಜಕೀಯದಲ್ಲಿ ಆಶ್ರಯ ಪಡೆಯುತ್ತಿವೆ. ಇಂದು, ಭಾರತವು ಎರಡು ವಿಶಿಷ್ಟವಾದ ರಾಜಕೀಯ ಶೈಲಿಗಳನ್ನು ನೋಡುತ್ತಿದೆ. ಒಂದು ಎನ್‌ಡಿಎ ಸರ್ಕಾರದ ಕೆಲಸಗಳು. ಮತ್ತೊಂದು ಹಲವು ಪಕ್ಷಗಳ ಕ್ಷುಲ್ಲಕ ರಾಜಕೀಯ, ಇದು ಅವರ ತೀಕ್ಷ್ಣವಾದ ಮಾತುಗಳಲ್ಲಿ ಕಂಡುಬರುತ್ತದೆ' ಎಂದು ಅವರು ಹೇಳಿದರು

'ಕಳೆದ ಕೆಲವು ದಿನಗಳ ಬಳಿಕ ಈ ಪಕ್ಷಗಳು ಮತ್ತೊಮ್ಮೆ ಪತ್ರದ ಮೂಲಕ ಒಟ್ಟಿಗೆ ಸೇರಿವೆ. ಇದರಲ್ಲಿ ಅವುಗಳು ನಮ್ಮ ರಾಷ್ಟ್ರದ ಆತ್ಮದ ಮೇಲೆ ನೇರವಾದ ಆಕ್ರಮಣ ಮಾಡಿವೆ ಮತ್ತು ನಮ್ಮ ಕಠಿಣ ಪರಿಶ್ರಮಿ ನಾಗರಿಕರ ಮೇಲೆ ಆರೋಪ ಮಾಡಿವೆ ಎಂದಿದ್ದಾರೆ.

'ಭಾರತದ ಯುವಕರು ಅವಕಾಶಗಳನ್ನು ಬಯಸುತ್ತಾರೆ, ಅಡೆತಡೆಗಳನ್ನು ಅಲ್ಲ. ಅಭಿವೃದ್ಧಿಯನ್ನು ಬಯಸುತ್ತಾರೆ ವಿಭಜನೆಗಳನ್ನಲ್ಲ. ಅವರು ಎಲ್ಲಾ ಧರ್ಮಗಳು ಮತ್ತು ವಯೋಮಾನದ ಜನರು ಒಟ್ಟಿಗೆ ಸೇರಿ ಬಡತನವನ್ನು ಸೋಲಿಸಲು ಮತ್ತು ಭಾರತವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲು ಒಗ್ಗೂಡಿದ್ದಾರೆ' ಎಂದು ಹೇಳಿದರು.

ಪ್ರತಿಪಕ್ಷಗಳು ಈಗಲಾದರೂ ತಮ್ಮ ನೀತಿಯನ್ನು ಬದಲಾಯಿಸಿಕೊಳ್ಳಲು ಮತ್ತು ಅಭಿವೃದ್ಧಿ ರಾಜಕೀಯವನ್ನು ಅಳವಡಿಸಿಕೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದ ಕರೌಲಿಯಲ್ಲಿ ನಡೆದ ಧಾರ್ಮಿಕ ಮೆರವಣಿಗೆ ಸಂದರ್ಭದಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಈ ವಿಷಯದ ಬಗ್ಗೆ ಅವರ ಕಡು ಮೌನವನ್ನು ಪ್ರೇರೇಪಿಸಿರುವ ಅಂಶಗಳು ಯಾವುವು ಎಂದು ಪ್ರಶ್ನಿಸಿದ್ದಾರೆ.

ವಿರೋಧ ಪಕ್ಷಗಳ 13 ಸದಸ್ಯರು ಶನಿವಾರ ಪತ್ರ ಬರೆದು, ದೇಶದಲ್ಲಿನ ಇತ್ತೀಚಿನ ಧ್ವೇಷ ಭಾಷಣಗಳು ಮತ್ತು ಕೋಮು ಹಿಂಸಾಚಾರಕ್ಕೆ ಕಳವಳ ವ್ಯಕ್ತಪಡಿಸಿದ್ದರು ಮತ್ತು ಶಾಂತಿ ಮತ್ತು ಸಾಮರಸ್ಯ ಕಾಪಾಡಿಕೊಳ್ಳುವಂತೆ ಜನತೆಗೆ ಮನವಿ ಮಾಡಿದ್ದರು.

ಜಂಟಿ ಹೇಳಿಕೆಯಲ್ಲಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳು ನಾಡು ಮತ್ತು ಜಾರ್ಖಂಡ್‌ನ ಮುಖ್ಯಮಂತ್ರಿಗಳಾದ ಎಂ.ಕೆ. ಸ್ಟಾಲಿನ್ ಮತ್ತು ಹೇಮಂತ್ ಸೊರೇನ್‌ ಸೇರಿದಂತೆ ನಾಯಕರು ಆಹಾರ, ಉಡುಗೆ, ನಂಬಿಕೆ, ಹಬ್ಬಗಳು ಮತ್ತು ಭಾಷೆಗೆ ಸಂಬಂಧಿಸಿದ ಸಮಸ್ಯೆಗಳನ್ನು 'ಸಮಾಜವನ್ನು ಧ್ರುವೀಕರಣಗೊಳಿಸಲು ಆಡಳಿತರೂಢ ಸರ್ಕಾರ ಉದ್ದೇಶಪೂರ್ವಕವಾಗಿ ಬಳಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT