ಭಾನುವಾರ, ಮೇ 16, 2021
22 °C

ದೆಹಲಿ: ಆಂಬುಲೆನ್ಸ್‌ಗಳಿಗೆ ಭಾರಿ ಭೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೆಹಲಿ ನಗರದಲ್ಲಿ ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ಸೇರಿಸುವ ಸಲುವಾಗಿ ಆಂಬುಲೆನ್ಸ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಈ ಸಲುವಾಗಿ ಕಳೆದೊಂದು ವಾರದಿಂದ ನಿತ್ಯವೂ 2,550 ಕರೆಗಳು ಬಂದಿವೆ. ನಗರಾಡಳಿತವು ನೀಡಿರುವ ಈ ದತ್ತಾಂಶವನ್ನು ಗಮನಿಸಿದರೆ ದೆಹಲಿಯಲ್ಲಿ ಕೋವಿಡ್ ಅಲೆಯ ಹೊಡೆತ ಎಷ್ಟಿದೆ ಎಂದು ತಿಳಿಯುತ್ತದೆ.

ಒಟ್ಟಾರೆ ಒಂದು ವಾರದಲ್ಲಿ 17,924 ಕರೆಗಳು ಬಂದಿವೆ. ಹಿಂದಿನ ವಾರಗಳಿಗೆ ಹೋಲಿಸಿದರೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಏಪ್ರಿಲ್ ಮೊದಲ ವಾರದಲ್ಲಿ 1,900 ಕರೆಗಳು ಬಂದಿದ್ದವು.

ಏಪ್ರಿಲ್ 15 ಮತ್ತು 16ರಂದು 2,279, ಏಪ್ರಿಲ್ 20ರಂದು 2,861, ಏಪ್ರಿಲ್ 21ರಂದು 2,618 ಆಂಬುಲೆನ್ಸ್‌ಗಳನ್ನು ಬೇಡಿಕೆ ಮೇರೆಗೆ ಕಳುಹಿಸಿಕೊಡಲಾಗಿದೆ. ಈ ಅವಧಿಯಲ್ಲಿ ದೆಹಲಿಯಲ್ಲಿ 1,347 ಜನರು ಮೃತಪಟ್ಟಿದ್ದಾರೆ.

ಸಾವಿನ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ, ಅಧಿಕಾರಿಗಳು ಈಗ ನೇರ ಮೇಲ್ವಿಚಾರಣಾ ವ್ಯವಸ್ಥೆ ಜಾರಿಗೊಳಸಿದ್ದಾರೆ. ಸ್ಮಶಾನಗಳ ನಿರ್ವಹಣೆಗೆ ನಿಯಂತ್ರಣ ಕೊಠಡಿ ಪ್ರಾರಂಭಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.