ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ–ಕೇಂದ್ರದ ನಡುವಿನ ವ್ಯಾಜ್ಯ ಸಾಂವಿಧಾನಿಕ ಪೀಠಕ್ಕೆ ನೀಡಿ ‘ಸುಪ್ರೀಂ’ ಆದೇಶ

ಸೇವೆಗಳ ಮೇಲೆ ನಿಯಂತ್ರಣ ಕುರಿತ ವಿವಾದ
Last Updated 6 ಮೇ 2022, 10:29 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಡ್ರ ರಾಜಧಾನಿಯಲ್ಲಿ ಒದಗಿಸಲಾಗುವ ಸೇವೆಗಳು ಯಾರ ನಿಯಂತ್ರಣದಲ್ಲಿರಬೇಕು ಎಂಬುದಕ್ಕೆ ಸಂಬಂಧಿಸಿ ದೆಹಲಿ ಸರ್ಕಾರ ಹಾಗೂ ಕೇಂದ್ರದ ನಡುವಿನ ವಿವಾದವನ್ನು, ಐವರು ನ್ಯಾಯಮೂರ್ತಿಗಳಿರುವ ಸಾಂವಿಧಾನಿಕ ಪೀಠಕ್ಕೆ ನೀಡಿಸುಪ್ರೀಂಕೋರ್ಟ್‌ ಶುಕ್ರವಾರ ಆದೇಶಿಸಿದೆ.

ಮುಖ್ಯನ್ಯಾಯಮೂರ್ತಿ ಎನ್‌.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಹಿಮಾ ಕೊಹ್ಲಿ ಅವರಿದ್ದ ನ್ಯಾಯಪೀಠ, ಈ ಕುರಿತ ಅರ್ಜಿ ವಿಚಾರಣೆ ನಡೆಸಿತು.

‘ಸೇವೆಗಳ ಮೇಲಿನ ನಿಯಂತ್ರಣ ಹೊರತುಪಡಿಸಿ ಉಳಿದ ವಿಷಯಗಳ ಬಗ್ಗೆ ಈ ಹಿಂದಿನ ಸಾಂವಿಧಾನಿಕ ಪೀಠವು 2018ರಲ್ಲಿಯೇ ವಿಸ್ತೃತ ಆದೇಶ ನೀಡಿದೆ. ಹೀಗಾಗಿ ಉಳಿದ ವಿಷಯಗಳ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸುವುದಿಲ್ಲ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

‘ಈ ಅರ್ಜಿಯನ್ನು ಮೇ 11ರಂದು ವಿಚಾರಣೆಯ ಪಟ್ಟಿಗೆ ಸೇರಿಸಲಾಗುವುದು. ಹೀಗಾಗಿ, ವಿಚಾರಣೆಯನ್ನು ಮತ್ತೆ ಮುಂದೂಡುವಂತೆ ಕೇಳಬೇಡಿ’ ಎಂದು ನ್ಯಾಯಪೀಠವು ಕಕ್ಷಿದಾರರಿಗೆ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT