ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ದೆಹಲಿಯ 75 ಸ್ಥಳಗಳಲ್ಲಿ 115 ಅಡಿ ಎತ್ತರದ ತ್ರಿವರ್ಣ ಧ್ವಜ ಹಾರಾಟ

Last Updated 27 ಜನವರಿ 2022, 3:16 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವನ್ನು ಆಚರಿಸುವ ಸಲುವಾಗಿ ದೆಹಲಿ ಸರ್ಕಾರವು, ಇಂದು (ಜನವರಿ 27) ರಾಷ್ಟ್ರ ರಾಜಧಾನಿಯ 75 ಸ್ಥಳಗಳಲ್ಲಿ 115 ಅಡಿ ಎತ್ತರದ ತ್ರಿವರ್ಣ ಧ್ವಜವನ್ನು ಹಾರಿಸಲಿದೆ ಎಂದು ಪಿಡಬ್ಲ್ಯುಡಿ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.

ಈ ಕ್ರಮವು ದೇಶದ ಕೋಟ್ಯಂತರ ಜನರಲ್ಲಿ ದೇಶಭಕ್ತಿಯ ಭಾವನೆ ಮೂಡಿಸಲು ನೆರವಾಗಲಿದೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ 500 ಸ್ಥಳಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಯೋಜನೆ ಇರಿಸಲಾಗಿದೆ. ಜನವರಿ 27ರಂದು 75 ಸ್ಥಳಗಳಲ್ಲಿ ಧ್ವಜ ಹಾರಿಸಲಾಗುವುದು. ಉಳಿದವುಗಳನ್ನು ಮಾರ್ಚ್ 31ರೊಳಗೆ ಹಾರಿಸುವ ಗುರಿ ಹೊಂದಲಾಗಿದೆ ಎಂದು ಪಿಡಬ್ಲ್ಯುಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾರ್ವಜನಿಕ ಪ್ರದೇಶಗಳಾದ ಉದ್ಯಾನಗಳು, ಶಾಲೆ, ಮಾರುಕಟ್ಟೆ ಸಂಕೀರ್ಣ, ವಸತಿ ಪ್ರದೇಶ ಹಾಗೂ ತೆರೆದ ಮೈದಾನಗಳಲ್ಲಿ ಧ್ವಜ ಹಾರಿಸುವ ಯೋಜನೆ ಹೊಂದಲಾಗಿದೆ.

ದೆಹಲಿ ಸರ್ಕಾರದ 'ದೇಶಭಕ್ತಿ ಬಜೆಟ್' ಅಡಿಯಲ್ಲಿ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT