ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವದೆಹಲಿ: ನಾಲ್ವರು ಅಲ್‌ಕೈದಾ ಉಗ್ರರಿಗೆ 7 ವರ್ಷ ಜೈಲು

Last Updated 14 ಫೆಬ್ರುವರಿ 2023, 14:14 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಕೈಗೊಳ್ಳಲು ಸಂಚು ರೂಪಿಸಿದ ಹಾಗೂ ತಮ್ಮ ಉಗ್ರ ಸಂಘಟನೆಗೆ ಸದಸ್ಯರನ್ನು ಸೇರಿಸಿಕೊಳ್ಳಲು ಪ್ರಯತ್ನಿಸಿದ ಆರೋಪಕ್ಕಾಗಿ ಅಲ್‌ಕೈದಾ ಉಗ್ರ ಸಂಘಟನೆಯ ವಿಭಾಗವಾದ ಭಾರತೀಯ ಉಪಖಂಡ ಅಲ್‌ಕೈದಾದ (ಎಕ್ಯುಐಎಸ್‌) ನಾಲ್ವರು ಉಗ್ರರಿಗೆ ದೆಹಲಿಯ ನ್ಯಾಯಾಲಯ ಏಳು ವರ್ಷ ಐದು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

‘ಮೌಲಾನಾ ಮೊಹಮದ್‌ ಅಬ್ದುಲ್‌ ರೆಹಮಾನ್‌ ಕಸ್ಮಿ, ಮೊಹಮದ್‌ ಆಸಿಫ್‌, ಜಾಫರ್‌ ಮಸೂದ್‌ ಹಾಗೂ ಅಬ್ದುಲ್‌ ಸಮಿ ಎಂಬುವವರಿಗೆ ವಿಶೇಷ ನ್ಯಾಯಾಧೀಶ ಸಂಜಯ್‌ ಖನಗ್ವಾಲ್‌ ಅವರು ಈ ಶಿಕ್ಷೆ ವಿಧಿಸಿದ್ದಾರೆ’ ಎಂದು ಅಪರಾಧಿಗಳ ಪರ ವಕೀಲ ಅಕ್ರಮ್‌ ಖಾನ್‌ ತಿಳಿಸಿದ್ದಾರೆ.

‘ಅಪರಾಧಿಗಳು ಈಗಾಗಲೇ ಏಳು ವರ್ಷ ಮೂರು ತಿಂಗಳ ಅವಧಿಯನ್ನು ಜೈಲಿನಲ್ಲೇ ಕಳೆದಿದ್ದಾರೆ. ಈ ಅವಧಿಯನ್ನು ಶಿಕ್ಷೆಯ ಭಾಗವಾಗಿ ಪರಿಗಣಿಸಲಾಗುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT