ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಮೇಲೆ ಹಲ್ಲೆ ಪ್ರಕರಣ: ಇಬ್ಬರು ಎಎಪಿ ಶಾಸಕರು ದೋಷಿಗಳು ಎಂದ ದೆಹಲಿ ಕೋರ್ಟ್

Last Updated 13 ಸೆಪ್ಟೆಂಬರ್ 2022, 6:31 IST
ಅಕ್ಷರ ಗಾತ್ರ

ನವದೆಹಲಿ:2015ರಲ್ಲಿ ಉತ್ತರ ದೆಹಲಿಯ ಬುರಾರಿ ಪೊಲೀಸ್‌ ಠಾಣೆ ಮೇಲೆ ದಾಳಿ ನಡೆಸಿ ಪೊಲೀಸರಿಗೆ ಹಲ್ಲೆ ಮಾಡಿದ ಗುಂಪಿನ ಭಾಗವಾಗಿದ್ದ ಆಮ್‌ ಆದ್ಮಿ ಪಕ್ಷದ (ಎಎಪಿ) ಶಾಸಕರಾದ ಅಖಿಲೇಶ್‌ಪಾಟಿ ತ್ರಿಪಾಠಿ ಮತ್ತು ಸಂಜೀವ್‌ ಝಾ ದೋಷಿಗಳು ಎಂದು ಇಲ್ಲಿನ ನ್ಯಾಯಾಲಯ ತೀರ್ಪು ನೀಡಿದೆ.

ಗುಂಪಿನಲ್ಲಿದ್ದ ಇತರ 15 ಜನರನ್ನೂ ಈ ಪ್ರಕರಣದಲ್ಲಿತಪ್ಪಿತಸ್ಥರು ಎಂದುಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ವೈಭವ್‌ ಮೆಹ್ತಾ ಪ್ರಕಟಿಸಿದ್ದಾರೆ.

ಶಾಸಕರನ್ನು ಹೊರತುಪಡಿಸಿಬಲರಾಂ ಝಾ, ಶ್ಯಾಮ್‌ ಗೋಪಾಲ್‌ ಗುಪ್ತಾ, ಕಿಶೋರ್‌ ಕುಮಾರ್‌, ಲಲಿತ್‌ ಮಿಶ್ರಾ, ಜಗದೀಶ್‌ ಚಂದ್ರ ಜೋಶಿ, ನರೇಂದ್ರ ಸಿಂಗ್‌ ರಾವ್‌, ನೀರಜ್‌ ಪಾಠಕ್‌, ರಾಜು ಮಲಿಕ್‌, ಅಶೋಕ್‌ ಕುಮಾರ್‌, ರವಿ ಪ್ರಕಾಶ್‌ ಝಾ, ಇಸ್ಮಾಯಿಲ್‌ ಇಸ್ಲಾಂ, ಮನೋಜ್‌ ಕುಮಾರ್‌, ವಿಜಯ್‌ ಪ್ರತಾಪ್‌ ಸಿಂಗ್‌, ಹೀರಾ ದೇವಿ ಮತ್ತು ಯಶ್ವಂತ್‌ ಇತರ ದೋಷಿಗಳು.

ಇವರ ವಿರುದ್ಧ ಐಪಿಸಿಯ ಸೆಕ್ಷನ್‌ 147 (ಗಲಭೆ), ಸೆಕ್ಷನ್‌ 186 (ಸಾರ್ವಜನಿಕ ಸೇವೆಗೆ ಅಡ್ಡಿ), ಸೆಕ್ಷನ್‌ 149 (ಕಾನೂನು ಬಾಹಿರವಾಗಿ ಗುಂಪುಗೂಡಿದ್ದು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ನ್ಯಾಯಾಲಯವುಸೆಪ್ಟೆಂಬರ್‌ 21ರಂದುಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ. ತಪ್ಪಿತಸ್ಥರಿಗೆ ಕನಿಷ್ಠ 3 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.

2015ರ ಫೆಬ್ರುವರಿ 20ರಂದು ರಾತ್ರಿ ಗಲಭೆ ನಡೆದಿತ್ತು. ಠಾಣೆಯಲ್ಲಿ ಬಂಧಿಸಲಾಗಿದ್ದ ಇಬ್ಬರನ್ನು ತಮ್ಮ ವಶಕ್ಕೆ ನೀಡುವಂತೆ ದುಷ್ಕರ್ಮಿಗಳ ಗುಂಪು ಒತ್ತಾಯಿಸಿತ್ತು. ಅವರನ್ನು ಸಮಾಧಾನ ಪಡಿಸಲು ಪೊಲೀಸರು ಪ್ರಯತ್ನಿಸಿದ್ದರು. ಆದರೆ, ಶಾಸಕರು ಗಲಭೆಗೆ ಪ್ರಚೋದನೆ ನೀಡಿದ್ದರು. ಈ ವೇಳೆ ಗುಂಪಿನಲ್ಲಿದ್ದವರು ಕಲ್ಲು ತೂರಾಟ ನಡೆಸಿ, ಪೊಲೀಸರ ಮೇಲೂ ಹಲ್ಲೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT