ಭಾನುವಾರ, ಮಾರ್ಚ್ 7, 2021
30 °C

ಅಂದ್ರಾಬಿ, ಇಬ್ಬರು ಸಹಚರರ ವಿರುದ್ಧ ಭಯೋತ್ಪಾದನೆ ಆರೋಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕಿ ಆಸಿಯಾ ಅಂದ್ರಾಬಿ ಹಾಗೂ ಆಕೆಯ ಇಬ್ಬರು ಸಹಚರರ ವಿರುದ್ಧ ದೆಹಲಿ ಕೋರ್ಟ್‌ ಭಯೋತ್ಪಾದನೆ, ದೇಶದ್ರೋಹ ಹಾಗೂ ಇತರ ಆರೋಪಗಳನ್ನು ಹೊರಿಸಿದೆ.

ಅಂದ್ರಾಬಿ ಹಾಗೂ ಸಹಚರರಾದ ಸೋಫಿ ಫೆಹಮಿದಾ, ನಹಿದಾ ನಸ್ರೀನ್‌ ಅವರ ವಿರುದ್ಧ ಐಪಿಸಿ ಹಾಗೂ ಯುಎಪಿಎ ಅಡಿ ಆರೋಪ ಹೊರಿಸಲಾಗಿದೆ. ಪಾಕಿಸ್ತಾನದ ನೆರವಿನೊಂದಿಗೆ ದೇಶದ ವಿರುದ್ಧ ಯುದ್ಧ ಹೂಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಈ ಮೂವರನ್ನು 2018ರ ಏಪ್ರಿಲ್‌ನಲ್ಲಿ ಬಂಧಿಸಲಾಗಿದೆ.

ವಿಶೇಷ ನ್ಯಾಯಾಧೀಶರಾದ ಪರ್ವೀನ್‌ ಸಿಂಗ್‌ ಅವರು ವಿಚಾರಣೆ ಆರಂಭಿಸಿದ್ದಾರೆ.

ದುಖ್ತರನ್‌–ಎ–ಮಿಲ್ಲತ್‌ (ರಾಷ್ಟ್ರದ ಪುತ್ರಿಯರು) ಎಂಬ ಸಂಘಟನೆಯ ಮುಖ್ಯಸ್ಥೆಯಾಗಿರುವ ಅಂದ್ರಾಬಿ, ಆಕೆಯ ಸಹಚರರು ದೇಶವನ್ನು ಅಸ್ಥಿರಗೊಳಿಸಿ, ಭಾರತದ ಸಾರ್ವಭೌಮತೆಗೆ ಧಕ್ಕೆ ತರಲು ಪಿತೂರಿ ನಡೆಸಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಲ್ಲಿಸಿರುವ ಎಫ್ಐಆರ್‌ನಲ್ಲಿ ಆರೋಪಿಸಲಾಗಿದೆ.

ಈ ಉಗ್ರ ಸಂಘಟನೆಯನ್ನು ಯುಎಪಿಎ ಅಡಿ ನಿಷೇಧಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು