ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಪಾಸಿಟಿವ್‌ ಪ್ರಮಾಣ ಶೇ. 1ಕ್ಕಿಂತ ಕಡಿಮೆ; ಕೇವಲ 10,178 ಸಕ್ರಿಯ ಪ್ರಕರಣ

Last Updated 1 ಜೂನ್ 2021, 14:12 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ಹರಡುವಿಕೆಯ ಪ್ರಮಾಣ ಕಳೆದ ಒಂದು ವಾರದಲ್ಲಿ ಸಂಪೂರ್ಣ ನಿಯಂತ್ರಣಕ್ಕೆ ಬರುವ ಹಾದಿಯಲ್ಲಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗಿದೆ.

ಮೇ ಕೊನೆಯ ವಾರದಿಂದ ಕಡಿಮೆ ಆಗುತ್ತಿರುವ ಕೊರೊನಾದ ಶೇಕಡಾವಾರು ಪಾಸಿಟಿವ್ ಪ್ರಮಾಣ ಸೋಮವಾರದಿಂದಲೇ ಶೇ. . 1ಕ್ಕಿಂತ ಕಡಿಮೆ ಪ್ರಮಾಣದಲ್ಲಿ ದಾಖಲಾಗುತ್ತಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಮಂಗಳವಾರ ಸಂಜೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದ 70,813 ಜನರ ಪೈಕಿ, ಕೇವಲ 623 ಜನರಲ್ಲಿ (ಪಾಸಿಟಿವ್ ಪ್ರಮಾಣ ಶೇ. 0.88) ಮಾತ್ರ ಸೋಂಕು ದೃಢಪಟ್ಟಿದೆ. 1,423 ಜನ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 10,178ಕ್ಕೆ ಇಳಿದಿದೆ.

ಇದೇ ವೇಳೆ 62 ಜನ ಚಿಕಿತ್ಸೆಗೆ ಸ್ಪಂದಿಸದೆ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿನ ಪ್ರಮಾಣವೂ ದಿನೇದಿನೇ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗುತ್ತ ಸಾಗಿರುವುದು ಆಶಾದಾಯಕವಾಗಿದೆ.‌

ಸೋಮವಾರ ಪರೀಕ್ಷೆಗೆ ಒಳಗಾಗಿದ್ದ 65,240 ಜನರ ಪೈಕಿ 648 ಜನರಲ್ಲಿ (ಶೇ. 0.99) ಸೋಂಕು ದೃಢಪಟ್ಟಿದ್ದು, 86 ಜನ ಮೃತಪಟ್ಟಿದ್ದರು. 1,622 ಜನ ಗುಣಮುಖರಾಗಿದ್ದರು.

ದೆಹಲಿಯಲ್ಲಿ ಇದುವರೆಗೆ ಕೊರೊನಾ ಸೋಂಕಿಗೆ ಒಳಗಾಗಿದ್ದ 14,26,863 ಜನರ ಪೈಕಿ 13,92,386 ಜನ ಗುಣಮುಖರಾಗಿದ್ದಾರೆ. ಒಟ್ಟು 24,299 ಜನ ಪ್ರಾಣ ಕಳೆದುಕೊಂಡಿದ್ದಾರೆ.

ಕೊರೊನಾ ನಿಯಂತ್ರಣದ ನಿಟ್ಟಿನಲ್ಲಿ ಏಪ್ರಿಲ್‌ 16ರಂದು ಘೋಷಿಸಲಾಗಿರುವ ಲಾಕ್‌ಡೌನ್‌ ಅನ್ನು ಜೂನ್‌ 7ರ ವರೆಗೂ ಮುಂದುವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT