ಶುಕ್ರವಾರ, ಸೆಪ್ಟೆಂಬರ್ 17, 2021
30 °C

ದೆಹಲಿ: ತಿಹಾರ್‌ ಜೈಲಿನಲ್ಲಿ ಕೋವಿಡ್‌ ಲಸಿಕಾ ಕೇಂದ್ರ ಸ್ಥಾಪನೆ

ಪಿಟಿಐ Updated:

ಅಕ್ಷರ ಗಾತ್ರ : | |

ಲಸಿಕೆ ಹಾಕುತ್ತಿರುವುದು– ಸಾಂದರ್ಭಿಕ ಚಿತ್ರ

ನವದೆಹಲಿ: ‘ದೆಹಲಿ ಕಾರಾಗೃಹ ಇಲಾಖೆಯು ಅರ್ಹ ಕೈದಿಗಳಿಗೆ ಲಸಿಕೆ ನೀಡಲು ತಿಹಾರ್ ಜೈಲಿನೊಳಗೆ ಕೋವಿಡ್‌ ಲಸಿಕಾ ಕೇಂದ್ರವನ್ನು ಸ್ಥಾಪಿಸಿದೆ’ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ದೆಹಲಿಯ ಕಾರಾಗೃಹಗಳಲ್ಲಿ 326ಕ್ಕೂ ಹೆಚ್ಚು 60 ವರ್ಷ ಮೇಲ್ಪಟ್ಟ ಕೈದಿಗಳಿದ್ದಾರೆ. 45–59 ವಯಸ್ಸಿನ 300 ಕ್ಕೂ ಹೆ‌ಚ್ಚು ಕೈದಿಗಳಿದ್ದಾರೆ. ಕೇಂದ್ರ ಕಾರಾಗೃಹದ ಜೈಲು ಸಂಖ್ಯೆ 3ರ ಆಸ್ಪತ್ರೆಯಲ್ಲಿ ಕೋವಿಡ್‌ ಲಸಿಕಾ ಕೇಂದ್ರವನ್ನು ಮಂಗಳವಾರ ಸ್ಥಾಪಿಸಲಾಗಿದೆ. ಈಗಾಗಲೇ ತಿಹಾರ್‌, ರೋಹಿಣಿ ಮತ್ತು ಮಂಡೋಲಿ ಜೈಲಿನ 70 ರಿಂದ 80 ಕೈದಿಗಳಿಗೆ ಲಸಿಕೆ ನೀಡಲಾಗಿದೆ’ ಎಂದು ಜೈಲಿನ ಅಧಿಕಾರಿಗಳು ಹೇಳಿದರು.

‘ಮಾರ್ಚ್‌ 18ರಂದು ಕೈದಿಗಳ ಕೋವಿಡ್‌ ಲಸಿಕಾ ಅಭಿಯಾನ ಆರಂಭವಾಗಿದೆ. ಅದೇ ದಿನ 13 ಕೈದಿಗಳಿಗೆ ಲಸಿಕೆ ನೀಡಲಾಗಿದೆ. ಕೇಂದ್ರ ಜೈಲಿನ ಆಸ್ಪತ್ರೆಯ ತಂಡಗಳು ಮುಂದಿನ ವಾರ ರೋಹಿಣಿ ಮತ್ತು ಮಂಡೋಲಿ ಕಾರಾಗೃಹಕ್ಕೆ ತೆರಳಿ, ಅರ್ಹ ಕೈದಿಗಳಿಗೆ ಲಸಿಕೆ ನೀಡಲಿದ್ದಾರೆ. ಅವಶ್ಯಕತೆ ಇದ್ದಲ್ಲಿ ಮಂಡೋಲಿ ಜೈಲಿನಲ್ಲೂ ಕೋವಿಡ್‌ ಲಸಿಕಾ ಕೇಂದ್ರ ತೆರೆಯಲಾಗುವುದು’ ಎಂದು ಕಾರಾಗೃಹಗಳ ಮಹಾ ನಿರ್ದೇಶಕ ಸಂದೀಪ್‌ ಗೋಯಲ್‌ ಮಾಹಿತಿ ನೀಡಿದರು.

‘45 ವರ್ಷ ಮೇಲ್ಪಟ್ಟ ಕೈದಿಗಳ ಕುಟುಂಬಸ್ಥರಿಗೆ ಕೆಲವೊಂದು ಸಂಬಂಧ‍ಪಟ್ಟ ದಾಖಲೆಗಳನ್ನು ವ್ಯಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಲು ಸೂಚಿಸಿದ್ದೇವೆ. ಆದರೆ ಇದರಲ್ಲಿ ಕೆಲವು ಕೈದಿಗಳು ಕುಟುಂಬಸ್ಥರು ದಾಖಲೆಗಳನ್ನು ಕಳುಹಿಸಿಲ್ಲ. ಹಾಗಾಗಿ ಅವರು ಲಸಿಕೆಯಿಂದ ವಂಚಿತರಾಗಿದ್ದಾರೆ. ಆದರೆ ನಾವು ಅವರಿಗೆ ಲಸಿಕೆ ನೀಡುವ ಮಾರ್ಗವನ್ನು ಪತ್ತೆಹಚ್ಚುತ್ತಿದ್ದೇವೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು