ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಸಂತೆ ಮಾರಾಟ ತಡೆಗೆ ದೆಹಲಿ ಸರ್ಕಾರ ವಿಫಲ: ಹೈಕೋರ್ಟ್ ಚಾಟಿ

Last Updated 27 ಏಪ್ರಿಲ್ 2021, 14:56 IST
ಅಕ್ಷರ ಗಾತ್ರ

ನವದೆಹಲಿ: ‘ದೆಹಲಿಯಲ್ಲಿ ಆಮ್‌ ಅದ್ಮಿ ಪಕ್ಷದ ಸರ್ಕಾರದ ಆಡಳಿತ ಸಂಪೂರ್ಣ ವ್ಯವಸ್ಥೆ ವಿಫಲವಾಗಿದೆ. ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಬೇಕಾಗಿರುವ ಆಕ್ಸಿಜನ್‌ ಸಿಲಿಂಡರ್‌ಗಳು ಮತ್ತು ಅಗತ್ಯ ಔಷಧಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ’ ಎಂದು ಹೈಕೋರ್ಟ್‌ ಮಂಗಳವಾರ ದೆಹಲಿ ಸರ್ಕಾರದ ವಿರುದ್ಧ ಚಾಟಿ ಬೀಸಿದೆ.

‘ಇದು, ಗಿಡುಗಗಳಾಗಬೇಕಾದ ಸಂದರ್ಭವಲ್ಲ’ ಎಂದು ನ್ಯಾಯಮೂರ್ತಿಗಳಾದ ವಿಪಿನ್‌ ಸಾಂಘಿ ಮತ್ತು ರೇಖಾ ಪಳ್ಳಿ ಅವರು ಅಭಿಪ್ರಾಯಪಟ್ಟರು.

‘ನಿಮಗೆ ಕಾಳಸಂತೆಯ ಮಾರುಕಟ್ಟೆ ಅರಿವಿಗೆ ಬಂದಿದೆಯೇ? ಇದು, ಮಾನವೀಯ ನಡೆಯೇ?’ ಎಂದೂ ಪೀಠವು ಆಕ್ಸಿಜನ್‌ ರೀಫಿಲ್ಲರ್‌ ಘಟಕಗಳಿಗೆ ಪ್ರಶ್ನಿಸಿತು.

‘ರಾಜ್ಯ ಸರ್ಕಾರವು ಬಗೆಹರಿಸಲಾಗದಷ್ಟು ಇದು ಗೊಂದಲಕಾರಿಯಾಗಿದೆ. ನಿಮಗೆ ಅಧಿಕಾರವಿದೆ, ಅಧಿಕಾರದಲ್ಲಿ ಇದ್ದೀರಿ. ಆಕ್ಸಿಜನ್ ಸಿಲಿಂಡರ್‌ಗಳು ಮತ್ತು ಔಷಧಗಳನ್ನು ಕಾಳಸಂತೆಯಲ್ಲಿ ಮಾರುತ್ತಿರುವವರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಿ’ ಎಂದು ಪೀಠವು ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT