ಶನಿವಾರ, ಏಪ್ರಿಲ್ 17, 2021
23 °C

ಮುಂಬೈ ಪೊಲೀಸ್ ಆಯುಕ್ತ ಹುದ್ದೆಯಿಂದ ಪರಮ್‌ ವರ್ಗಾವಣೆ: ಸಮರ್ಥಿಸಿಕೊಂಡ ಶಿವಸೇನಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮುಂಬೈ ಪೊಲೀಸ್ ಆಯುಕ್ತರ ಹುದ್ದೆಯಿಂದ ವರ್ಗಾವಣೆಗೊಂಡಿರುವ ಪರಮ್‌ ಬೀರ್ ಸಿಂಗ್‌ ಅವರನ್ನು ಸಮರ್ಥಿಸಿಕೊಂಡ ಶಿವಸೇನಾ, ‘ವರ್ಗಾವಣೆಯಾದ ಮಾತ್ರಕ್ಕೆ ಅವರು ಅಪರಾಧಿಯಾಗುವುದಿಲ್ಲ‘ ಎಂದು ಹೇಳಿದೆ.

ಟಿಆರ್‌ಪಿ ಹಗರಣ ಅವರ ಆಡಳಿತಾವಧಿಯಲ್ಲೇ ಬೆಳಕಿಗೆ ಬಂದಿದ್ದರಿಂದ ದೆಹಲಿಯಲ್ಲಿನ ಅಧಿಕಾರ ವರ್ಗಕ್ಕೆ ಇರಿಸು ಮುರಿಸು ಆಗಿತ್ತು ಎಂದು ಆರೋಪ ಮಾಡಿದೆ.

ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಪೋಟಕಗಳು ತುಂಬಿದ್ದ ಎಸ್‌ಯುವಿ ಪತ್ತೆಯಾದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೈಗೊಂಡ ಕ್ರಮವನ್ನು ಪ್ರಶ್ನಿಸಿರುವ ಆಡಳಿತ ಪಕ್ಷ ಶಿವಸೇನಾ, ಈ ಸಂಸ್ಥೆ ಸಾಮಾನ್ಯವಾಗಿ ಭಯೋತ್ಪಾದನೆ ಸಂಬಂಧಿತ ಪ್ರಕರಣಗಳನ್ನು ತನಿಖೆ ಮಾಡುತ್ತದೆ. ಈ ಪ್ರಕರಣದಲ್ಲಿ ಯಾವುದೇ ಭಯೋತ್ಪಾದಕತೆಯ ದೃಷ್ಟಿಕೋನ ಇರಲಿಲ್ಲ‘ ಎಂದು ಹೇಳಿದೆ. 

ಈ ಪ್ರಕರಣದ ನಿರ್ವಹಣೆಗೆ ಸಂಬಂಧಿಸಿದಂತೆ ಪರಮ್‌ ಬೀರ್ ಸಿಂಗ್ ಅವರನ್ನು ಮಹಾರಾಷ್ಟ್ರ ಸರ್ಕಾರ ಮುಂಬೈ ಪೊಲೀಸ್ ಆಯುಕ್ತರ ಹುದ್ದೆಯಿಂದ ಬುಧವಾರ ವರ್ಗಾವಣೆ ಮಾಡಿತ್ತು. ಅವರ ಸ್ಥಾನಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಗರಾಳೆ ಅವರನ್ನು ನೇಮಕ ಮಾಡಿತ್ತು.

ಶಿವಸೇನಾ, ತಮ್ಮ ಪಕ್ಷದ ಮುಖವಾಣಿ ‘ಸಾಮ್ನಾ‘ದಲ್ಲಿ ಈ ಪ್ರಕರಣದ ನಂತರ ನಡೆದ ರಾಜಕೀಯ ಬೆಳವಣಿಗಳು ಮತ್ತು ಪೊಲೀಸ್ ಆಯುಕ್ತರ ವರ್ಗಾವಣೆಯನ್ನು ಉಲ್ಲೇಖಿಸಿ, ಇದು ವಾಡಿಕೆಯ ವರ್ಗಾವಣೆಯಲ್ಲ ಎಂದು ಹೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು