ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಪಾಲಿಕೆ ಮೇಯರ್‌, ಉಪಮೇಯರ್‌ ಅಭ್ಯರ್ಥಿ ಹೆಸರು ಘೋಷಿಸಿದ ಬಿಜೆಪಿ

Last Updated 27 ಡಿಸೆಂಬರ್ 2022, 8:10 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮಹಾನಗರ ಪಾಲಿಕೆಗೆ ಮೇಯರ್‌ ಆಯ್ಕೆ ಜ.6ರಂದು ನಡೆಯಲಿದ್ದು, ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಕುತೂಹಲ ಹೆಚ್ಚಿಸಿದೆ. ಆಮ್‌ ಆದ್ಮಿ ಪಕ್ಷ ಮೇಯರ್‌ ಹಾಗೂ ಉಪಮೇಯರ್‌ ಅಭ್ಯರ್ಥಿಗಳ ಹೆಸರು ಘೋಷಿಸಿರುವ ಬೆನ್ನಲ್ಲೇ ಬಿಜೆಪಿ ಕೂಡ ಮಂಗಳವಾರ ತನ್ನ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ.

ರೇಖಾ ಗುಪ್ತಾ ಮತ್ತು ಕಮಲ್‌ ಬಾಗ್ಡಿ ಬಿಜೆಪಿಯ ಮೇಯರ್‌ ಹಾಗೂ ಉಪಮೇಯರ್‌ ಅಭ್ಯರ್ಥಿಗಳು. ಗುಪ್ತಾ, ಶಾಲಿಮಾರ್‌ ಬಾಗ್‌ನಿಂದ 3 ಸಲ ವಿಜೇತರು. ಬಾಗ್ಡಿ ರಾಮ್‌ ನಗರ್‌ನಿಂದ ಮೊದಲ ಸಲ ಪಾಲಿಕೆಸದಸ್ಯರಾಗಿದ್ದಾರೆ.

ಶೆಲ್ಲಿ ಒಬೆರಾಯ್‌ ಮೇಯರ್‌ ಮತ್ತು ಮಹಮ್ಮದ್‌ ಇಕ್ಬಾಲ್‌ ಉಪಮೇಯರ್‌ ಸ್ಥಾನಕ್ಕೆ ಎಎಪಿ ಅಭ್ಯರ್ಥಿಗಳಾಗಿದ್ದಾರೆ. ಶೆಲ್ಲಿ, ಪೂರ್ವ ಪಟೇಲ್‌ ನಗರ ವಾರ್ಡ್‌ನಿಂದ ಮೊದಲ ಸಲ ಆಯ್ಕೆಯಾಗಿದ್ದಾರೆ. ಇಕ್ಬಾಲ್‌, ಚಾಂದಿನಿ ಮಹಲ್‌ ವಾರ್ಡ್‌ನಿಂದ ಎರಡನೆ ಸಲ ವಿಜೇತರು.

ಒಬೆರಾಯ್‌ ಅತಿಥಿ ಉಪನ್ಯಾಸಕಿ. ಇಕ್ಬಾಲ್‌, ಎಎಪಿ ಶಾಸಕ ಶೋಯಬ್‌ ಇಕ್ಬಾಲ್‌ ಅವರ ಪುತ್ರ. ದೆಹಲಿ ಮೇಯರ್‌ ಹುದ್ದೆ 5 ವರ್ಷ ಅವಧಿಗೆ ಮಹಿಳೆಗೆ ಮೀಸಲಾಗಿದೆ. ಜ.6ರಂದು ಆಯ್ಕೆಯಾದ 250 ಸದಸ್ಯರು ಪ್ರಮಾಣವಚನ ಸ್ವೀಕರಿಸಿ ಮೇಯರ್‌ ಆಯ್ಕೆ ಮಾಡಲಿದ್ದಾರೆ. ಅಂದು ಆಯ್ಕೆಯಾದವರು 2023ರ ಏಪ್ರಿಲ್‌ವರೆಗೆ ಮೇಯರ್‌ ಸ್ಥಾನದಲ್ಲಿರಲಿದ್ದು, ಏಪ್ರಿಲ್‌ನಲ್ಲಿ ಮತ್ತೆ ಮೇಯರ್‌ ಆಯ್ಕೆ ನಡೆಯಲಿದೆ.

ಡಿ.7ರಂದು ನಡೆದ ಪಾಲಿಕೆ ಚುನಾವಣೆಯಲ್ಲಿ ಆಮ್‌ ಆದ್ಮಿ 134 ಸ್ಥಾನ ಗೆದ್ದಿತ್ತು. ಬಿಜೆಪಿ 104 ಸ್ಥಾನದಲ್ಲಿ ಜಯ ಗಳಿಸಿತ್ತು. ಎಎಪಿ ಗೆಲುವಿನ ಹೊರತಾಗಿಯೂ ತಮ್ಮ ಪಕ್ಷದವರೇ ಮೇಯರ್‌ ಆಗಲಿದ್ದಾರೆ ಎಂಬ ವಿಶ್ವಾಸವನ್ನು ಬಿಜೆಪಿ ಕೆಲ ನಾಯಕರು ವ್ಯಕ್ತಪಡಿಸಿದ್ದರು. ಹೀಗಾಗಿ ಮೇಯರ್‌ ಆಯ್ಕೆ ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT