ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಲಿ ನಾಯಕ ಸಿರ್ಸಾ ವಿರುದ್ದ ವಂಚನೆ ಪ್ರಕರಣ ದಾಖಲು

Last Updated 22 ಜನವರಿ 2021, 12:38 IST
ಅಕ್ಷರ ಗಾತ್ರ

ನವದೆಹಲಿ: ಶಿರೋಮಣಿ ಅಕಾಲಿದಳ ನಾಯಕ ಮತ್ತು ದೆಹಲಿ ಸಿಖ್‌ ಗುರುದ್ವಾರ ನಿರ್ವಹಣಾ ಸಮಿತಿ ಅಧ್ಯಕ್ಷ ಮಾಜಿಂದರ್ ಸಿಂಗ್ ಸಿರ್ಸಾ ವಿರುದ್ಧ ದೆಹಲಿ ಪೊಲೀಸ್‌ನ ಆರ್ಥಿಕ ಅಪರಾಧಗಳ ವಿಭಾಗವು ವಂಚನೆ ಪ್ರಕರಣ ದಾಖಲಿಸಿದೆ.

ವರದಿಗಳ ಪ್ರಕಾರ, ದೆಹಲಿ ಕೋರ್ಟ್‌ ಕಳೆದ ವರ್ಷ ಆರ್ಥಿಕ ಅಪರಾಧಗಳ ವಿಭಾಗಕ್ಕೆ ಸಿರ್ಸಾ ವಿರುದ್ಧ ಎಫ್ಐಆರ್‌ ದಾಖಲಿಸಲು ಆದೇಶಿಸಿತ್ತು. ಸಮಿತಿಯ ಕಾರ್ಯದರ್ಶಿಯಾಗಿ ಹಣಕಾಸು ದುರ್ಬಳಕೆ ಮಾಡಿರುವ ಆರೋಪ ಅವರ ಮೇಲಿದೆ.

ಸಿರ್ಸಾ ಮತ್ತು ಇತರರ ವಿರುದ್ಧ ಗುರುವಾರ ವಂಚನೆ ಸಂಬಂಧ ಪ್ರಕರಣ ದಾಖಲಾಗಿದೆ. ₹ 1 ಕೋಟಿ ಪಾವತಿಯಲ್ಲಿ ಲೋಪ, ಟೆಂಟ್, ಹೊದಿಕೆ, ಟಾರ್ಪಾಲು ಖರೀದಿಯಲ್ಲಿ ಅಕ್ರಮ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಮಿತಿಯ ನಿಧಿ ನಿರ್ವಹಣೆಯಲ್ಲಿ ಒಬ್ಬರಾಗಿರುವ ಭೂಪಿಂದರ್ ಸಿಂಗ್ ಅವರು ದೂರು ನೀಡಿದ್ದರು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT