ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ಯದಲ್ಲೇ ದೆಹಲಿ ಪೊಲೀಸ್‌ಗೆ 6,000 ಸಿಬ್ಬಂದಿ ನೇಮಕ: 3,000 ಮಹಿಳೆಯರು

Last Updated 9 ಫೆಬ್ರುವರಿ 2023, 13:18 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸದ್ಯದಲ್ಲೇ 3,000 ಮಹಿಳೆಯರು ಸೇರಿ 6,000 ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ದೆಹಲಿ ಪೊಲೀಸ್ ಇಲಾಖೆ ಹೇಳಿದೆ.

ಮಹಿಳೆಯರ ಸುರಕ್ಷತೆ ಕುರಿತಂತೆ ಚರ್ಚಿಸಲು ಲೆಫ್ಟಿನೆಂಟ್ ಗವರ್ನರ್ ನೇತೃತ್ವದಲ್ಲಿ ನಡೆದ ಸಭೆಗೆ ಈ ಮಾಹಿತಿ ನೀಡಲಾಗಿದೆ.

ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚಿಸುವ ಅಗತ್ಯವನ್ನು ಸಕ್ಸೇನಾ ಒತ್ತಿ ಹೇಳಿದರು.

ಕಣ್ಗಾವಲು, ಮಹಿಳಾ ಸುರಕ್ಷತೆ ಕುರಿತಾದ ಪ್ರಕರಣಗಳನ್ನು ವಿಚಾರಣೆ ನಡೆಸುವ ತ್ವರಿತ ನ್ಯಾಯಾಲಯಗಳಿಗೆ ಕಟ್ಟಡಗಳ ನಿರ್ಮಾಣವನ್ನು ತ್ವರಿತಗೊಳಿಸುವುದು ಮತ್ತು 311 ಅಪ್ಲಿಕೇಶನ್‌ಗೆ ಬೀದಿ ದೀಪಗಳನ್ನು ಸಂಯೋಜಿಸಲು ಸೂಚನೆ ನೀಡಲಾಗಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ನಗರದಲ್ಲಿ ಇನ್ನೂ 1,406 ಡಾರ್ಕ್ ಸ್ಪಾಟ್‌ಗಳಿದ್ದು, ಅಲ್ಲಿ ಬೀದಿ ದೀಪಗಳ ವ್ಯವಸ್ಥೆ ಆಗಬೇಕಿದ್ದು, ಒಂದು ತಿಂಗಳೊಳಗೆ ಕೆಲಸವನ್ನು ಪೂರ್ಣಗೊಳಿಸುವಂತೆ ಪಾಲಿಕೆಗೆ ಸೂಚಿಸಿದರು.

ಡಾರ್ಕ್ ಸ್ಪಾಟ್‌ಗಳಲ್ಲಿ ಬೆಳಕು ಕಲ್ಪಿಸುವುದು ಮತ್ತು ಬೀದಿ ದೀಪಗಳ ಸಮಯೋಚಿತ ದುರಸ್ತಿ ವಿಷಯಗಳ ಕುರಿತು ಪರಿಶೀಲಿಸಿದ ಲೆಫ್ಟಿನೆಂಟ್ ಗವರ್ನರ್, ಬೀದಿ ದೀಪಗಳು, ದುರಸ್ತಿ ಮತ್ತು ನಿರ್ವಹಣೆಯಂತಹ ಮೂಲಭೂತ ಕೆಲಸಗಳು ಸಾಮಾನ್ಯವಾಗಿ ನಡೆಯಬೇಕು ಎಂದು ಸೂಚಿಸಿದರು.

ಮಹಿಳಾ ಸುರಕ್ಷತೆಗಾಗಿ ತ್ವರಿತ ನ್ಯಾಯಾಲಯಗಳಲ್ಲಿ 32 ನ್ಯಾಯಾಧೀಶರನ್ನು ನೇಮಕ ಮಾಡಲಾಗಿದೆ. ಆದರೆ, ನ್ಯಾಯಾಲಯಗಳ ಕಾರ್ಯನಿರ್ವಹಣೆಗೆ ಕೊಠಡಿಗಳ ತೀವ್ರ ಕೊರತೆ ಇದೆ ಎಂದು ಅಧಿಕಾರಿಗಳು ಗವರ್ನರ್ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT