ದೆಹಲಿಯಲ್ಲಿ ಗಾಳಿ ಗುಣಮಟ್ಟ ಸೂಚ್ಯಂಕ ’ಕಳಪೆ’

ನವದೆಹಲಿ: ದೆಹಲಿಯಲ್ಲಿ ಸೋಮವಾರ ಮುಂಜಾನೆ ಗಾಳಿ ಗುಣಮಟ್ಟ ಸೂಚ್ಯಂಕ ’ಕಳಪೆ’ ಮಟ್ಟಕ್ಕೆ ತಲುಪಿದ್ದು, ಕಳೆದ ಮೂರು ದಿನಗಳಿಂದ ’ಗಂಭೀರ’ ಹಂತದಲ್ಲಿದ್ದ ಗಾಳಿಯ ಗುಣಮಟ್ಟ ಸ್ವಲ್ಪಮಟ್ಟಿಗೆ ಸುಧಾರಿಸಿದೆ.
ನಗರದ ಗಾಳಿ ಗುಣಮಟ್ಟ ಸೂಚ್ಯಂಕ(ಎಕ್ಯೂಐ) ಬೆಳಿಗ್ಗೆ 9.05ಕ್ಕೆ 385ರಷ್ಟಿತ್ತು. ದೆಹಲಿಯ ಆಸುಪಾಸಿನ ನಗರಗಳಾದ ನೋಯ್ಡಾ, ಗುರುಗ್ರಾಮ ಮತ್ತು ಗ್ರೇಟರ್ ನೋಯ್ಡಾ ನಗರಗಳಲ್ಲಿ ಕ್ರಮವಾಗಿ 406, 363, 296ರಷ್ಟು ಸೂಚ್ಯಂಕ ದಾಖಲಾಗಿದೆ.
ಬಹುದೊಡ್ಡ ಪ್ರಮಾಣದಲ್ಲಿ ಬೆಳೆ ತ್ಯಾಜ್ಯ ಸುಡುವುದರಿಂದ ಮಾಲಿನ್ಯ ಹೆಚ್ಚಾಗಿದ್ದು, ದೆಹಲಿಯಲ್ಲಿ ಭಾನುವಾರವೂ ಗಾಳಿಯ ಗುಣಮಟ್ಟದ ಸೂಚ್ಯಂಕ ’ಗಂಭೀರ’ ವಿಭಾಗದಲ್ಲಿತ್ತು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಅಂಕಿಅಂಶಗಳ ಪ್ರಕಾರ, ಭಾನುವಾರ ರಾತ್ರಿ 8 ಗಂಟೆಗೆ ನಗರದ ವಾಯು ಗುಣಮಟ್ಟ ಸೂಚ್ಯಂಕವು 416 (ತೀವ್ರ) ಇತ್ತು.
ಗಾಳಿಯ ಗುಣಮಟ್ಟ ಕುಸಿತವಾಗಿರುವ ನಡುವೆಯೇ ಸೋಮವಾರ ದೆಹಲಿಯ ತಾಪಮಾನ 13.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಈ ವರ್ಷದಲ್ಲಿ ದಾಖಲಾಗಿರುವ ಸಾಮಾನ್ಯ ತಾಪಮಾನವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.