ಬುಧವಾರ, ಜೂನ್ 29, 2022
21 °C

ದೆಹಲಿಯಲ್ಲಿ 25,986 ಹೊಸ ಕೋವಿಡ್ ಪ್ರಕರಣಗಳು, ಶೇ 31.76 ರಷ್ಟು ಪಾಸಿಟಿವಿಟಿ ದರ

ಪಿಟಿಐ‌ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿಯಲ್ಲಿ ಬುಧವಾರ 368ಕ್ಕೂ ಹೆಚ್ಚು ಕೋವಿಡ್-19 ಸಾವುಗಳು ಮತ್ತು 25,986 ಹೊಸ ಪ್ರಕರಣಗಳು ದಾಖಲಾಗಿದ್ದು, ಪಾಸಿಟಿವಿಟಿ ಪ್ರಮಾಣವು ಶೇ 31.76 ರಷ್ಟಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಇತ್ತೀಚಿನ ಬುಲೆಟಿನ್ ತಿಳಿಸಿದೆ.

ನಗರದಲ್ಲಿ ಮಂಗಳವಾರ 381 ಸಾವುಗಳು ವರದಿಯಾಗಿದ್ದು, ಒಂದು ವರ್ಷದ ಹಿಂದೆ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದಲೂ ಇದು ಅತ್ಯಂತ ಗರಿಷ್ಠ ಪ್ರಮಾಣವಾಗಿದೆ. ಸೋಮವಾರ 380, ಭಾನುವಾರ 350, ಶನಿವಾರ 357, ಶುಕ್ರವಾರ 348 ಮತ್ತು ಗುರುವಾರ 306 ಸಾವುಗಳು ಸಂಭವಿಸಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.

ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ 24,149, ಸೋಮವಾರ 20,201, ಭಾನುವಾರ 22,933, ಶನಿವಾರ 24,103, ಶುಕ್ರವಾರ 24,331, ಗುರುವಾರ 26,169, ಮತ್ತು ಕಳೆದ ಬುಧವಾರ 24,638 ಪ್ರಕರಣಗಳು ದಾಖಲಾಗಿದ್ದವು.

ಸಕಾರಾತ್ಮಕ ಪ್ರಕರಣಗಳ ಪ್ರಮಾಣ ಮಂಗಳವಾರ ಶೇ 32.72, ಸೋಮವಾರ ಶೇ 35.02, ಭಾನುವಾರ ಶೇ 30.21, ಶನಿವಾರ ಶೇ 32.27, ಶುಕ್ರವಾರ ಶೇ 32.43, ಗುರುವಾರ ಶೇ 36.24 ಮತ್ತು ಕಳೆದ ಬುಧವಾರ ಶೇ 31.28ರಷ್ಟು ದಾಖಲಾಗಿದೆ.

ಇತ್ತೀಚಿನ ಆರೋಗ್ಯ ಬುಲೆಟಿನ್ ಪ್ರಕಾರ, ದೆಹಲಿಯಲ್ಲಿ ಕೋವಿಡ್-19 ಸೋಂಕಿನ ಒಟ್ಟು ಪ್ರಕರಣಗಳು 10,53,701ರಷ್ಟಿದ್ದು, ಸಾವಿನ ಸಂಖ್ಯೆ 14,616 ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆ 99,752 ಆಗಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ 81,829 ಜನರಿಗೆ ನಡೆಸಿದ ಪರೀಕ್ಷೆಗಳಲ್ಲಿ ಹೊಸ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 26,127 ರ‍್ಯಾಪಿಡ್-ಆಂಟಿಜೆನ್ ಪರೀಕ್ಷೆಗಳು ಸೇರಿವೆ. ನಗರದ ಆಸ್ಪತ್ರೆಗಳಲ್ಲಿನ 20,926 ಹಾಸಿಗೆಗಳ ಪೈಕಿ 1,683 ಮಾತ್ರ ಖಾಲಿ ಇವೆ. ಹೋಂ ಕ್ವಾರಂಟೈನ್‌ನಲ್ಲಿ ಒಟ್ಟು 54,578 ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬುಲೆಟಿನ್ ತಿಳಿಸಿದೆ.

ನಗರದಲ್ಲಿ ಕಂಟೈನ್‌ಮೆಂಟ್ ವಲಯಗಳ ಸಂಖ್ಯೆ 31,570 ರಿಂದ 33,749 ಕ್ಕೆ ಏರಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು