ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಶನಿವಾರ 500ಕ್ಕಿಂತಲೂ ಕಡಿಮೆ ಕೋವಿಡ್ ಪ್ರಕರಣ ದಾಖಲು 

Last Updated 2 ಜನವರಿ 2021, 10:44 IST
ಅಕ್ಷರ ಗಾತ್ರ

ನವದೆಹಲಿ: ದೇಶದ ರಾಜಧಾನಿ ನವದೆಹಲಿಯಲ್ಲಿ ಶನಿವಾರ 494 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದು ಕಳೆದ 7 ತಿಂಗಳಿನಿಂದ ಈಚೆಗೆ ಕಂಡು ಬಂದ ದಿನವೊಂದರ ಅತ್ಯಂತ ಕಡಿಮೆ ಪ್ರಕರಣಗಳಾಗಿವೆ. ಇದೇ ದಿನ 14 ಮಂದಿ ಕೋವಿಡ್ ಪೀಡಿತರು ಅಸುನೀಗಿದ್ದಾರೆ. ಆದರೆ, ದೆಹಲಿಯ ಕೋವಿಡ್ ಪಾಸಿಟಿವ್ ದರಶೇ. 0.73 ಪ್ರಮಾಣದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಶನಿವಾರದ ಹೊಸ ಪ್ರಕರಣಗಳ ಬಳಿಕ ನವದೆಹಲಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6.26 ಲಕ್ಷಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆ 10,561ಕ್ಕೆ ಹೆಚ್ಚಳವಾಗಿದೆ. ಕಳೆದ 11 ದಿನಗಳಿಂದ ಕೋವಿಡ್ ಪಾಸಿಟಿವ್ ದರ ಶೇ. 1ಕ್ಕಿಂತ ಕಡಿಮೆ ಇದೆ ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಟ್ವಿಟ್ ಮಾಡಿದ್ದಾರೆ.

"7 ತಿಂಗಳಿಂದ(17 ಮೇ ಯಿಂದ) ಈಚೆಗೆ ಮೊದಲ ಬಾರಿಗೆ 500ಕ್ಕಿಂತ ಕಡಿಮೆ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಕೋವಿಡ್ ಪಾಸಿಟಿವಿಟಿ ದರ ನವೆಂಬರ್ 7ರಂದು ಶೇ. 15.26% ರಿಂದ 0.73% ಕ್ಕೆ ಇಳಿದಿತ್ತು. ಕಳೆದ 11 ದಿನಗಳಿಂದ ಶೇ. 1ಕ್ಕಿಂತ ಕಡಿಮೆ ಇದೆ. ನವೆಂಬರ್ 13ರಂದು ಕೋವಿಡ್ ಸಕ್ರಿಯ ಪ್ರಕರಣಗಳು 44,456ರಿಂದ 5,342ಕ್ಕೆ ಇಳಿದಿವೆ. ಕೊರೊಣಾ ವೈರಾಣುವಿನ ಮೂರನೇ ಅಲೆಯು ಇಳಿಯುತ್ತಿದೆ. ಹೀಗಾಗಿ, ಎಚ್ಚರಿಕೆ ವಹಿಸಿ ಮತ್ತು ಎಲ್ಲ ನಿಯಮಾವಳಿಗಳನ್ನು ಪಾಲಿಸಿ" ಎಂದು ಟ್ವೀಟ್ ಮಾಡಿದ್ದಾರೆ.

ಡಿಸೆಂಬರ್ 21–23ರಿಂದ ಈಚಗೆ ದೆಹಲಿಯಲ್ಲಿ ದಿನದ ಕೋವಿಡ್ ಪ್ರಕರಣಗಳ ಸಂಖ್ಯೆ 1000ಕ್ಕೂ ಕಡಿಮೆ ಇದೆ. ಡಿಸೆಂಬರ್ 21ರಂದು 803, ಡಿಸೆಂಬರ್ 22ಕ್ಕೆ 939 ಮತ್ತು ಮಾರ್ಚ್ 23ರಂದು 871 ಹೊಸ ಪ್ರಕರಣ ದಾಖಲಾಗಿದ್ದವು.

ಆದರೂ, ಡಿಸೆಂಬರ್ 24ರಂದು 1,063 ಕೇಸ್ ದಾಖಲಾಗಿದ್ದವು. ಡಿಸೆಂಬರ್ 25ರಂದು ಮತ್ತೆ ಕುಸಿತ ಕಂಡು 758 ಪ್ರಕರಣ ವರದಿಯಾಗಿದ್ದವು. ಡಿ. 26ಕ್ಕೆ 655, ಡಿ. 27ರಂದು 757, 28ಕ್ಕೆ 564 ಕೇಸ್ ದಾಖಲಾಗುವ ಮೂಲಕ ಹೊಸ ಪ್ರಕರಣಗಳ ಸಂಖ್ಯೆ ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT