ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಂದು ದಿನದ ಬ್ರಿಟಿಷ್‌ ಹೈಕಮಿಷನರ್‌’ದೆಹಲಿಯ ಯುವತಿಗೆ ದೊರೆತ ಅವಕಾಶ

Last Updated 11 ಅಕ್ಟೋಬರ್ 2020, 8:03 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಬ್ರಿಟಿಷ್‌ ಹೈಕಮಿಷನರ್‌ ಸ್ಥಾನದ ಹೊಣೆಗಾರಿಕೆಬಿಡುವಿಲ್ಲದ ಕೆಲಸವೇ ಸರಿ. ಒಂದು ದಿನದ ಮಟ್ಟಿಗೆ ‘ಬ್ರಿಟಿಷ್ ಹೈಕಮಿಷನರ್‌’ ಆಗುವ ಅವಕಾಶ ಪಡೆದ 18 ವರ್ಷದ ಯುವತಿಯೊಬ್ಬರು ಅಂಥ ಕೆಲಸವನ್ನು ನಿಭಾಯಿಸಿದ್ದಾರೆ.

ದೆಹಲಿಯ ಚೈತನ್ಯ ವೆಂಕಟೇಶ್ವರನ್ ಅವರು ಅಂಥ ಅವಕಾಶವನ್ನು ಪಡೆದ ಯುವತಿ. ಕಳೆದ ಬುಧವಾರ ಬ್ರಿಟಿಷ್ಹೈಕಮಿಷನರ್ ಹೊಣೆಯನ್ನು ಅವರು ನಿಭಾಯಿಸಿದರು. ವಿಶ್ವದಾದ್ಯಂತ ಮಹಿಳಾ ಸಬಲೀಕರಣ ಮತ್ತು ಮಹಿಳೆಯರು ಎದುರಿಸುತ್ತಿರುವ ಸವಾಲುಗಳತ್ತ ಗಮನಸೆಳೆಯುವ ಕಾರ್ಯಕ್ರಮದ ಭಾಗವಾಗಿ ಈ ಹೊಣೆ ನೀಡಲಾಗಿತ್ತು.

ಬ್ರಿಟಿಷ್‌ ಹೈಕಮಿಷನರ್‌ ಕಚೇರಿಯು ‘ಹೈಕಮೀಷನರ್ ಫಾರ್ ಎ ಡೆ’ ವಾರ್ಷಿಕ ಸ್ಪರ್ಧೆಯನ್ನು 2017ರಿಂದ ‘ಅಂತರ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ’ ಕಾರ್ಯಕ್ರಮದ ಭಾಗವಾಗಿ ಆಯೋಜಿಸುತ್ತಿದೆ. 18ರಿಂದ 23 ವರ್ಷದ ಯುವತಿಯರಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ.

ವಾರ್ಷಿಕ ಸ್ಪರ್ಧೆಯಲ್ಲಿ ಜಯಗಳಿಸುವ ಮೂಲಕ ಇಂತಹ ಅವಕಾಶವನ್ನು ಪಡೆದ ನಾಲ್ಕನೇ ಯುವತಿ ಚೈತನ್ಯಎಂದು ಬ್ರಿಟಿಷ್‌ಹೈಕಮಿಷನರ್ ಕಚೇರಿಯ ಹೇಳಿಕೆ ತಿಳಿಸಿದೆ.

‘ನಾನು ಚಿಕ್ಕವಳಾಗಿದ್ದಾಗ ನವದೆಹಲಿಯ ಬ್ರಿಟಿಷ್‌ ಕೌನ್ಸಿಲ್ ಗ್ರಂಥಾಲಯಕ್ಕೆ ಭೇಟಿ ನೀಡುತ್ತಿದ್ದೆ. ಅಲ್ಲಿಯೇ ನನಗೆ ಕಲಿಯುವ ಬಯಕೆ ಮೊಳಕೆಯೊಡೆಯಿತು. ಅಲ್ಲಿ ದೊರೆತ ಜ್ಞಾನದ ಫಲದಿಂದಾಗಿ ನನಗೆ ಒಂದು ದಿನದ ಮಟ್ಟಿಗೆ ಭಾರತದ ಬ್ರಿಟಿಷ್‌ ಹೈಕಮಿಷನರ್‌ ಆಗುವ ಅವಕಾಶ ದೊರೆತಿದೆ‘ ಎಂದು ಚೈತನ್ಯ ವೆಂಕಟೇಶ್ವರನ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT